ಇಂದು ಕಲಿಯುಗ ಎಂಬುದು ಡಿಜಿಟಲ್
ಯುಗವಾಗಿದೆಯೆಂದರೆ ಅದು ಅತಿಶಯೋಕ್ತಿ ಎನಿಸದು. ಇತ್ತೀಚಿಗೆ ಬಹುತೇಕ ನೊಂದಣಿ, ಇನ್ನಿತರ ಕಛೇರಿಯ ಕೆಲಸಗಳು ಆನ್ ಲೈನ್ ಮುಖಾಂತರವೇ ನಡೆಯುತ್ತಿರುವದು ಸಾಮಾನ್ಯವಾಗಿದೆ. ಇವೆಲ್ಲವೂ ಕಂಪ್ಯೂಟರ್ ಮೂಲಕ ಆಗುತ್ತದೆ ನಿಜ. ಆದರೂ ಸ್ಮಾರ್ಟ್ ಫೋನ್ ಮೂಲಕ ಬಹುಪಾಲು
ಕೆಲಸಗಳನ್ನು ನಾವೇ ಸರಳವಾಗಿ ಮಾಡಿಕೊಳ್ಳಬಹುದು ಇದಕ್ಕೆ
ಇಂಟರ್ನೆಟ್ ನ ಸರಿಯಾದ ಸಂಪರ್ಕ ಇರುವದು ಅತ್ಯಗತ್ಯ.
ಬನ್ನಿ ಸ್ಮಾರ್ಟ್ ಪೋನಿನ ಸದ್ಬಳಕೆಯನ್ನು ಈ ‘ನೆಟ್ ತಂತ್ರ’ ಲೇಖನ ಮಾಲೆಯಿಂದ ತಿಳಿದುಕೊಳ್ಳೋಣ.
ವೈಫೈ
ವೈಯರ್ ಲೆಸ್ ಫಿಡೆಲಿಟಿ ಎಂಬುದರ ಸೂಕ್ಷ್ಮ ರೂಪವೇ ವೈಫೈ.
ಈ ತಂತ್ರಜ್ಞಾನವು ರೇಡಿಯೋ ತರಂಗಾಂತರ ವ್ಯವಸ್ಥೆಯಮೇಲೆ ಸಂವಹನೆಯಾಗಿ ಮಾಹಿತಿ ವಿನಿಮಯ, ಫೈಲ್ ಹಂಚಿಕೆಯಂತಹ ಕೆಲಸಕಾರ್ಯಗಳಿಗೆ ಬಳಕೆಯಾಗುತ್ತಿದೆ. ಜನಪ್ರಿಯ ಶೇರ್ ಇಟ್ ಎನ್ನುವ ಅಪ್ಲಿಕೇಶನ್ ಈ ವೈಫೈ ವ್ಯವಸ್ಥೆಯನ್ನು ಆಧರಿಸಿ
ಕೆಲಸ ಮಾಡುತ್ತದೆ.
ನಿಮ್ಮ ವಾಸಸ್ಥಳದ ಸಮೀಪ ಮೊಬೈಲ್ ಟವರ್ ಸಿಗ್ನಲ್
ದೊರಕದ ಸಂದರ್ಭದಲ್ಲಿ ಸ್ಥಿರ ದೂರವಾಣಿ ಸಂಪರ್ಕದಿಂದ
ವೈಯರ್ ಲೆಸ್ ಮಾಡೆಮ್ (ವೈಫೈ ಮಾಡೆಮ್) ಮೂಲಕ ಅಂತರ್ಜಾಲ ಸಂಪರ್ಕ ಹೊಂದಬಹುದು.
ಬಸ್,ರೈಲ್ವೆ,
ವಿಮಾನ ನಿಲ್ದಾಣಗಳಲ್ಲಿ ಉಚಿತವಾಗಿ ವೈಫೈ ವ್ಯವಸ್ಥೆ ಮಾಡಿರುತ್ತಾರೆ. ಈಗ
ಗ್ರಾಮ ಪಂಚಾಯತಗಳಲ್ಲಿ ಕೂಡಾ ವೈಫೈಯನ್ನು ಸರ್ಕಾರವು ಉಚಿತವಾಗಿ (ದಿನಕ್ಕೆ 100 MB) ಕೊಡುತ್ತಿದೆ.
ಬಳಕೆಯ ವಿಧಾನ.
ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ವೈಫೈಯನ್ನು
ಆನ್ ಮಾಡಿಕೊಳ್ಳಬೇಕು ನಂತರ free WiFi ಎಂದು ನಿಮ್ಮ ಮೊಬೈಲ್ ನಲ್ಲಿ ತೋರಿಸುತ್ತದೆ. ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಯನ್ನು ನಮೂದಿಸಬೇಕು. ನಿಮಗೆ ಒಂದು OTP ಅಥವಾ ಪಿನ್ ಮೆಸೇಜ್ ಬರುತ್ತದೆ ಆ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ನಮೂದಿಸಿದ ನಂತರ
ಇಂಟರ್ನೆಟ್ಟನ್ನು ಬಳಕೆಮಾಡಬಹುದು.
ಉಚಿತವಾಗಿ ಸಿಗುವ ವೈಫೈಸಂಪರ್ಕದಿಂದ ವಾಟ್ಸಪ್, ಫೇಸ್ ಬುಕ್, ಯೂ ಟ್ಯೂಬ್ ನಂತಹ ಮನರಂಜನಾ ತಾಣ, ಸುದ್ದಿ ಪತ್ರಿಕೆ
ಗಳನ್ನು ಓದಬಹುದು.(ಪಂಚಾಯತದಲ್ಲಿನ ವೈಫೈ ಯಲ್ಲಿ ವಾಟ್ಸಪ್ ಸೇವೆ ಸಿಗುವದಿಲ್ಲ.) ನಿಮ್ಮ ಮೊಬೈಲ್‌ನಲ್ಲಿರುವ
ಮಾಹಿತಿಯನ್ನು ಮೂರನೇ ವ್ಯಕ್ತಿ ಪಡೆಯಬಹುದಾಗಿದೆ.ಇಂತಹ ಸ್ಥಳಗಳಲ್ಲಿ ಮೊಬೈಲ್ ಮೂಲಕ ಹಣಕಾಸು ವ್ಯವಹಾರ, ವರ್ಗಾವಣೆ ಮಾಡದಿರುವದು ಉತ್ತಮ.
OTP - One Time
password.
ಒಟಿಪಿ ಪಾಸ್ ವರ್ಡ್
ಎಂದರೆ ಒಂದು ಬಾರಿ ಬಳಕೆ ಮಾಡುವ ಪಾಸ್ ವರ್ಡ್ ಆಗಿದ್ದು ಇದು ನಾವು ಮಾಡುವ ವ್ಯಹಹಾರಕ್ಕೆ ಪುನಃ
ದೃಢಿಕರಣ ಮಾಡಲು ಬಳಕೆಯಾಗುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿನ ಹಣಕಾಸು ವರ್ಗಾವಣೆಯು OTP ಇಲ್ಲದೇ ನಡೆಯುವುದಿಲ್ಲ.
(ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)
|