ಆ್ಯಪಲ್ ಕಂಪನಿಯು ತನ್ನದೇ ಆದ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್) ಮತ್ತು ಗ್ರಾಹಕರ ಆದ್ಯತೆಗೆ ಒತ್ತು ಕೊಟ್ಟಿದ್ದರಿಂದ ಆ್ಯಪಲ್ ನ ಉತ್ಪಾದನೆಗಳಾದ ಕಂಪ್ಯೂಟರ್, ಐಪೋನ್ ,ಐಪಾಡ್, ಐಪ್ಯಾಡ್ ಮನೆಮಾತಾಗಿದೆ.
ದರ ದುಬಾರಿ ಆದರೂ ತನ್ನ ವಿಶಿಷ್ಟವಾದ ವಿನ್ಯಾಸದದಿಂದ ಬಹು ಜನಪ್ರಿಯತೆ ಗಳಿಸಿರುವ ಐಪ್ಯಾಡ್ ಎರಡು ಗಾತ್ರದಲ್ಲಿ ಸಿಗುತ್ತವೆ.
9.7 ಇಂಚಿನ ಐಪ್ಯಾಡ್ ಮನೆಬಳಕೆಗೆ ಅತ್ಯುತ್ತಮವಾಗಿದೆ.(rs 33,300)ಇದು ರೆಟಿನಾ ಡಿಸ್ಪ್ಲೇ ಹೊಂದಿದೆ.ಇದರಿಂದ ಬದಿಯಿಂದ ನೋಡಿದರೂ ಸ್ಪಷ್ಟವಾಗಿ ಚಿತ್ರ ವೀಕ್ಷಿಸಬಹುದು. ಅಲ್ಲದೇ ಐಪ್ಯಾಡ್ ನ ಗುಣಮಟ್ಟದ ಡಿಸ್ಪ್ಲೆ ಕಣ್ಣಿಗೆ ಆಯಾಸ ಉಂಟು ಮಾಡುವದಿಲ್ಲ.

ಉತ್ತಮ ಕ್ಯಾಮರಾ ಹೊಂದಿದ್ದು ಹೊರಾಂಗಣದಲ್ಲಿ ಉತ್ತಮ ಗುಣಮಟ್ಟದ ಪೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡಬಹುದು. ಸಂಗೀತ ಆಲಿಸಲು ಇದರಲ್ಲಿ ಒಳ್ಳೆಯ ಸ್ಪೀಕರ್ ಅಳವಡಿಸಿದ್ದು ಧ್ವನಿಯ ಗುಣಮಟ್ಟ ಅಧ್ಬುತವಾಗಿದೆ.
ಶಕ್ತಿಶಾಲಿ ಬ್ಯಾಟರಿಯನ್ನು ಒಳಗೊಂಡಿರುವ 470 ಗ್ರಾಂ ತೂಕದ ಐಪ್ಯಾಡ್ ನೋಡಲು ಆಕರ್ಷಕವಾಗಿದೆ.ಮುಂಭಾಗದಲ್ಲಿ ಒಂದು ಸಾಫ್ಟ್ ಬಟನ್ ಕೊಟ್ಟಿದ್ದಾರೆ ಇದು ಬ್ಯಾಕ್ ಅಥವಾ ಹೋಮ್ ಆಪ್ಷನ್ ಗೆ ಹೋಗಲು ಬಳಕೆಯಾಗುತ್ತದೆ. ವಾಲ್ಯೂಮ್ ಬಟನ್ ಐಪ್ಯಾಡಿನ ಅಂಚಿನಲ್ಲಿದೆ. ಇಂಟರ್ನೆಟ್ ಬಳಕೆಗೆ
ಸಿಮ್ ಹಾಕಿ ಉಪಯೋಗಿಸುವ ಮತ್ತು ಕೇವಲ ವೈಪೈಯೊಂದೇ ಇರುವ ವಿವಿಧ ಮೆಮೋರಿ ಸಾಮರ್ಥ್ಯದ ಐಪ್ಯಾಡ್ ಗಳು ಆನ್ಲೈನ್ ನಲ್ಲಿ ದೊಡ್ಡ ನಗರಗಳಲ್ಲಿ ಆ್ಯಪಲ್ ಡೀಲರ್ ಬಳಿಯಲ್ಲಿ ಲಭ್ಯವಿದೆ.

ಮಕ್ಕಳ ಕಲಿಕೆಗೆ:
ಆ್ಯಪಲ್ ನ ಆ್ಯಪ್ ಸ್ಟೋರ್ ನಲ್ಲಿ ವಯಸ್ಸಿಗೆ ಅನುಗುಣವಾಗು ಮಕ್ಕಳ ಕಲಿಕೆಗೆ ನೆರವಾಗುವ ಸಾಕಷ್ಟು ಅಪ್ಲಿಕೇಶನ್ ಗಳಿವೆ.
ಬಣ್ಣಗಳ ಗುರುತಿವಿಕೆ,ಅಕ್ಷರಕಲಿಗೆ ಹಾಗೂ ಬುದ್ದಿಗೆ ಕಸರತ್ತು ನೀಡುವಂತಹ ಆಟಗಳೂ ಇವೆ. ಇಲ್ಲಿ ಲಭ್ಯವಿರುವ ಆ್ಯಪ್ಗಳು ಗಾತ್ರದಲ್ಲಿ ದೊಡ್ಡದಿದ್ದು ಉತ್ತಮಗುಣಮಟ್ಟದಾಗಿರುತ್ತದೆ.

ಕಲರಿಂಗ್ ಮಾಡುವದು ಚಿತ್ರ ಬಿಡಿಸಲು ನೆರವಾಗುವ ಆಟಗಳು ಚನ್ನಾಗಿದೆ.(ಆಂಡ್ರಾಯ್ಡ್ ಮೊಬೈಲ್ ನ ಪ್ಲೇ ಸ್ಟೋನ್ ನಲ್ಲಿಯೂ ಈ ಬಗೆಯ ಆ್ಯಪ್ ಲಭ್ಯವಿದೆ.)
ಮನೋರಂಜನೆ.
ಐಪ್ಯಾಡಿನಲ್ಲಿ ಪೇಸ್ ಬುಕ್ ಬಳಸಿದಾಗ ಹೊಸ ಬಗೆಯ ಅನುಭವವಾಗುತ್ತದೆ. ಕಣ್ಣಿಗೆ ಆಯಾಸವಾಗದಂತೆ ಅತ್ಯಂತ ಕಡಿಮೆ ಬೆಳಕಿನಲ್ಲಿ ಪೋಟೋಗಳು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಕನ್ನಡದ ಅಕ್ಷರಗಳು ಅಪರೂಪಕ್ಕೆ ಸರಿಯಾಗಿ ಮೂಡುವದಿಲ್ಲ.ಕೆಲವೊಂದು ಒತ್ತಕ್ಷರದಲ್ಲಿ ಸ್ವಲ್ಪ ತೊಡಕಾಗುತ್ತದೆ.
ಉಳಿದಂತೆ ಸಿನೆಮಾ ,ಯೂಟ್ಯೂಬ್ ವೀಕ್ಷಿಸಲು ಸಮರ್ಪಕ ಸಾಧನೆಂದರೆ ಅತಿಶಯೋಕ್ತಿ ಎನಿಸುವದಿಲ್ಲ.