Monday, December 4, 2017

ಆನ್ಲೈನ್ ಮೂಲಕ ಬಿಲ್ ಪಾವತಿಸಿಲು ಸ್ಮಾರ್ಟ್ ವಿಧಾನ:





ಹಳ್ಳಿಯ ಬಹುತೇಕ  ಜನರಿಗೆ ತಿಂಗಳ ಕೊನೆ ಬಂತೆಂದರೆ ಸಾಕು ಕರೆಂಟ್ ಬಿಲ್ ,ಪೋನ್ ಬಿಲ್ ತುಂಬುವ ಸಲುವಾಗಿ ಕೇಂದ್ರ ಸ್ಥಾನಕ್ಕೆ ಹೋಗುವ ಅನಿವಾರ್ಯತೆ ಇದೆ. ಸೇವೆ  ನಮಗೆ ಬೇಕಾದಲ್ಲಿ ಹಣ ತುಂಬಲೇ ಬೇಕು.   ಈ ಲೇಖನ ಓದಿದ ಮೇಲೆ ನೀವು ಬಿಲ್ ಪಾವತಿಸಲು ಬಹಳ ದೂರ ಹೋಗ ಬೇಕಿಲ್ಲ ಸರಿಯಾದ ಮೊಬೈಲ್‌ ಕವರೇಜ್ , ಇಂಟರ್ನೆಟ್ ಸಿಗ್ನಲ್ ಇರುವಲ್ಲಿತನಕ ಹೋದರೆ ಸಾಕು.!

ಕೇಂದ್ರ ಸರಕಾರದ ಇತ್ತೀಚಿಗೆ ಹಣಕಾಸು ವಹಿವಾಟು ನೆಡೆಸಲು ಕೆಲ ಮಹತ್ತರ ಬದಲಾವಣೆ ತಂದಿದೆ. ನಗದು ರಹಿತ ಆನ್ಲೈನ್ ವ್ಯವಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಯನ್ನು ನೀಡಿ ಸರಕಾರದಿಂದಲೇ ಹಣಪಾವತಿಸುವ ಅಪ್ಲಿಕೇಷನ್ ಕೂಡಾ ಬಿಡುಗಡೆ ಮಾಡಿದೆ. ಈ ಹೊತ್ತಿಗೆ ಬಹು ಹಿಂದಿನಿಂದ ಇದ್ದ ಖಾಸಗೀ  ಕಂಪನಿಗಳ ಆನ್ಲೈನ್ ಮೂಲಕ ಹಣ ಪಾವತಿಸುವ ಅಪ್ಲಿಕೇಶನ್ ಗಳು ವ್ಯಾಪಕವಾಗಿ ಚಾಲ್ತಿಯಲ್ಲಿಬಂತು. 

ಸುಲಭ, ತ್ವರಿತ ಹಾಗೂ ಕಾಗದ ರಹಿತ ವಾಗಿ ಬಿಲ್ ಪಾವತಿಸುವದು, ಹಣದ ವರ್ಗಾವಣೆಯನ್ನು ಅಪ್ಲಿಕೇಶನ್ ಮೂಲಕ ಸುಲಭವಾಗಿ ಮಾಡಬಹುದು.

ನಾನು ಬಹಳ ಹಿಂದಿನಿಂದ ಪ್ರೀಚಾರ್ಜ ಎಂಬ ಅಪ್ಲಿಕೇಶನ್ ಮೂಲಕ ಪೋನ್ ಬಿಲ್.ಮೊಬೈಲ್ ಕರೆನ್ಸಿ ಟಾಪ್ ಅಪ್,ಟೀವಿ ರಿಸೀವರ್ ರೀಚಾರ್ಜ್ ಗಳನ್ನು ಮನೆಯಲ್ಲೇ ಕುಳಿತು ಮಾಡುತ್ತ ಬಂದಿದ್ದೇನೆ. ಈ ಅಪ್ಲಿಕೇಶನ್ ನಿಜಕ್ಕೂ ಸ್ಮಾರ್ಟ್ ಆಗಿದೆ.  ಉದಾಹರಣೆಗೆ ಬಿಎಸ್ಎನ್ ಎಲ್ ನ ಲ್ಯಾಂಡ್‌ ಲೈನ್ ನ ಮಾಸಿಕ ಬಿಲ್ ನ  ಮೊತ್ತದ ಮೆಸೇಜ್ ನಿಮ್ಮ ಪೋನಿಗೆ ಬಂದಿದ್ದನ್ನು 







ಸ್ವಯಂಚಾಲಿತವಾಗಿ  ಓದಿಕೊಂಡು ಹಣಪಾವತಿಸಲು ನಮಗೆ ವಿನಂತಿಸುತ್ತದೆ.ಕೆಲವೇ ಕ್ಷಣದಲ್ಲಿ ನಮ್ಮ ಎಟಿಎಂ ಕಾರ್ಡಿನ cvv ನಂಬರ್ ನಮೂದಿಸುವದು ಹಾಗೂ ನಂತರ ನಮಗೆ ಬರುವ ಒಟಿಪಿ ಮೆಸೆಜನ್ನು ಧೃಡಿಕರಣ ಮಾಡಿದರೆ ಬಿಲ್ ಪಾವತಿಯ ಪ್ರಕ್ರಿಯೆ ಮುಗಿಯುತ್ತದೆ.
ಇದು ವರೆಗೂ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಅಪ್ಲಿಕೇಶನ್ ತಯಾರಿಸುವ ಕಂಪನಿಯು ನಾವು ನಮೂದಿಸುವ ವಿಷಯಗಳನ್ನು ಗೋಪ್ಯವಾಗಿ ಹಾಗೂ ದಾಳಿಕೋರರ (ಹ್ಯಾಕರ್) ,ವಿರುದ್ಧ ಸಾಕಷ್ಟು ಭದ್ರತಾ ಮುನ್ನೆಚ್ಚರಿಕೆ ಹೊಂದಿರುತ್ತದೆ. ಹಾಗಾಗಿ ಆರಾಮವಾಗಿ ಬಿಲ್ ಪಾವತಿಸಬಹುದು.

ಇಲ್ಲಿಯ ತನಕ ಕರೆಂಟ್ ಬಿಲ್ ಅನ್ನು ಹೊರಗಡೆ ತುಂಬಬೇಕಾಗಿತ್ತು.ಇತ್ತೀಚೆಗೆ ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ) ಯವರು
 ಪೇಟಿಎಂ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಂಡು ವಿದ್ಯುತ್ ಬಿಲ್ ಕೂಡಾ ಮೊಬೈಲ್ ಮೂಲಕ ಪಾವತಿಸಲು ಅನುಕೂಲ ಮಾಡಿಕೊಟ್ಟಿದೆ.


ಬಿಲ್ ಪಾವತಿಸುವ ಮುನ್ನ:

ನಿಮ್ಮ ಸ್ಮಾರ್ಟ್ ಪೋನಿನಲ್ಲಿ ಗೂಗಲ್ ಪ್ಲೇ ಸ್ಟೂರ್ ಓಪನ್ ಮಾಡಿ. ನೀವು   ಆಯ್ಕೆ ಮಾಡಿದ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. 
ಅಲ್ಲಿ ಸೂಚಿಸಿದಂತೆ ನಿಮ್ಮ ಚಾಲ್ತಿಯಲ್ಲಿರುವ ಎಟಿಮ್ ಕಾರ್ಡ ನಂಬರ್ ನಮೂದಿಸಿ. ಈಮೇಲ್ ವಿವರದ ಜೊತೆಗೆ ಇನ್ನಿತರ ಮಾಹಿತಿಯನ್ನು ತುಂಬಬೇಕು.ಇದಕ್ಕೆ ಮೂರು ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. ಒಮ್ಮೆ ನಮೂದಿಸಿದ  ಎಟಿಎಂ ಕಾರ್ಡ ವಿವರವನ್ನು ಮತ್ತೆ ಬಿಲ್ ಪಾವತಿಸುವಾಗ ತುಂಬಬೇಕಿಲ್ಲ.
ನಿಮ್ಮ ಅಪ್ಲಿಕೇಶನ್ ನಲ್ಲಿ ಭದ್ರವಾಗಿ ಸೇವ್ ಆಗಿರುತ್ತದೆ.



ಆನ್ಲೈನ್ ಬಿಲ್ ಪಾವತಿಯಲ್ಲಿ ಹಲವಾರು ಬಗೆಯ ರಿಯಾತಿಗಳು ದೊರೆಯುವ ಅವಕಾಶವೂ ಇದೆ. ಈ ಆ್ಯಪ್ ನಿಂದ ಪಟ್ಟಣದವರು  ಜಲಮಂಡಲಿಯ ಸಹಭಾಗಿತ್ವ ಇದ್ದರೆ ನೀರಿನ ಬಿಲ್ ಕೂಡಾ ತುಂಬಬಹುದು. ಮೆಟ್ರೋ ರೈಲ್ ಟಿಕೇಟ್, ಟೋಲ್ ಸುಂಕ ಪಾವತಿ .ರೈಲ್ವೇ ಟಿಕೇಟ್ ಬುಕಿಂಗ್ ಸಿನಿಮಾ ಟಿಕೇಟ್ ಹಾಗೂ ಹೋಟೆಲಿನ ಬಿಲ್ ಪಾವತಿಸಲು ನೆರವಾಗುತ್ತದೆ.



cvv: ಕಾರ್ಡ ವೆರಿಪಿಕೇಷನ ವ್ಯಾಲ್ಯೂ ಎಂಬುದರ ಸಂಕ್ಷಿಪ್ತ ರೂಪ cvv.ನಿಮ್ಮ ಎಟಿಎಂ  ಕಾರ್ಡ
 ನ ಹಿಂಭಾಗದಲ್ಲಿ ಮೂರು ಅಂಕಿಗಳನ್ನು ಹೊಂದಿರುತ್ತದೆ.ಇದನ್ನೇ ಸಿವಿವಿ ನಂಬರ್ ಎನ್ನುವರು. ಪ್ರತಿಬಾರಿ ಅಪ್ಲಿಕೇಶನ್ ಮೂಲಕ ಹಣಪಾವತಿಸುವ ಸಮಯದಲ್ಲಿ ಇದನ್ನು ನಮೂದಿಸಬೇಕು.


No comments:

Post a Comment