ನಿರಂತರ ವಿದ್ಯುತ್ ಸಂಪರ್ಕದಿಂದ ಅಂತರ್ಜಾಲ ವ್ಯವಸ್ಥೆಯು ನಡೆಯುತ್ತಿದೆ. ಅಲ್ಲಿ ಕ್ಷಣಕಾಲ ವಿದ್ಯುತ್ ಶಕ್ತಿ ಸಂಚಲನೆ ನಿಂತರೂ ಮಾಹಿತಿಯ ಸಂವಹನೆ ಕಡಿತಗೊಳ್ಳುತ್ತದೆ.ಹಾಗೆಯೇ ನಾವು ಬಳಸುವ ಮೊಬೈಲಿನ ಬ್ಯಾಟರಿ ಡೌನ್ ಆದಾಗ ನಮ್ಮ ಎಲ್ಲ ಸಂಪರ್ಕವೂ ಕಡಿತಗೊಳ್ಳುತ್ತದೆ.ವಿಷೇಶವಾಗಿ ದೂರದ ಊರಿಗೆ ಪ್ರಯಾಣಸುವಾಗ ಮತ್ತು ಕರೆಂಟ್ ಕೈ ಕೊಟ್ಟಾಗ ಮೊಬೈಲ್ ಚಾರ್ಜ ಮಾಡುವದು ದೊಡ್ಡ ಸಮಸ್ಯೆಯಾಗುತ್ತದೆ.ಈ ಸಂಧರ್ಭದಲ್ಲಿ ಸುಲಭವಾಗಿ ಪವರ್ ಬ್ಯಾಂಕ್ ಮೂಲಕ ಮೊಬೈಲ್ ಚಾರ್ಜ ಮಾಡಿಕೊಳ್ಳ ಬಹುದು.ಅಲ್ಲದೇ
ಮೊಬೈಲ್ ನಲ್ಲಿ ಇಂಟರ್ ನೆಟ್ ಪ್ಯಾಕ್ ಅನ್ನು ಬಳಸುವಾಗ ಮೊಬೈಲ್ ನ ಬ್ಯಾಟರಿ ಯು ಬಹುಬೇಗ ಖಾಲಿಯಾಗುತ್ತದೆ.ನಗರ ಸಂಚಾರ ಮಾಡುತ್ತಿರುವಾಗ ಪವರ್ ಬ್ಯಾಂಕ್ ನ ಮೂಲಕ ಯು ಎಸ್ ಬಿ ವೈಯರ್ ಪಿನ್ ಮೊಬೈಲ್ ಗೆ ಜೋಡಿಸಿಟ್ಟು ನಮ್ಮ ಬ್ಯಾಗ್ ನಲ್ಲೇ ಚಾರ್ಜ್ ಮಾಡಬಹುದು.
ಪವರ್ ಬ್ಯಾಂಕ್ ಖರೀದಿಗೆ ಸಲಹೆ:
ನಾನು ಇಂಟೆಕ್ಸ್ ಕಂಪನಿಯ PB11K
11000mAh ಸಾಮರ್ಥ್ಯ ದ ಪವರ್ ಬ್ಯಾಂಕ್ ಬಳಸುತ್ತಿದ್ದೇನೆ.ಈ ಪವರ್ ಬ್ಯಾಂಕ್ ಒಮ್ಮೆ ಚಾರ್ಜ್ ಮಾಡಿದರೆ ಮೂರು ಬಾರಿ ಮೊಬೈಲ್ ಚಾರ್ಜ್ ಮಾಡಲು ಸಾಕಾಗುತ್ತದೆ.ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ ಎಂದರೆ ಅದು ಅತಿಶಯೋಕ್ತಿಯಲ್ಲ.
Intex PB11K ಪವರ್ ಬ್ಯಾಂಕ್ ನ ಒಳಗೆ ಐದು ಶಕ್ತಿ ಶಾಲಿ ರೀಚಾರ್ಜೇಬಲ್ ಶಲ್ಲ್ ಗಳನ್ನು ಹೊಂದಿರುವ ಇದು ಏಕಕಾಲಕ್ಕೆ ಮೂರು ಮೊಬೈಲ್ ಗಳನ್ನು ಚಾರ್ಜ ಮಾಡಿಕೊಳ್ಳ ಬಹುದು ಇದು 5ವೋಲ್ಟಿನ 2.1A, 2.1A,ಹಾಗೂ 1 A. ಶಕ್ತಿಯನ್ನು ಹೊರಹಾಕುವ
ಮೂರು ಯು ಎಸ್ ಬಿ ಕಿಂಡಿಯನ್ನು ಹೊಂದಿದ್ದು ನಿಮ್ಮ ಪೂನ್ ನ ಅವಶ್ಯಕತೆ ಗೆ ತಕ್ಕಂತೆ ಜಾರ್ಜ್ ಗೆ ಅಳಡಿಸಬಹುದು. ಇದಲ್ಲದೇ ಈ ಪವರ್ ಬ್ಯಾಂಕ್ ಹೊರಗಿನ ಬದಿಯಲ್ಲಿ ಮಿನಿ ಟಾರ್ಚ ಕೂಡಾ ಇದೆ.ಕತ್ತಲ್ಲಿ ಇದನ್ನು ಬಳಸಿ ಆರಾಮವಾಗಿ ಓಡಾಡಬಹುದು.
ಪವರ್ ಬ್ಯಾಂಕ್ ಅನ್ನು ನಿಮ್ಮ ಮೊಬೈಲ್ ಚಾರ್ಜರ್ ಅಥವಾ ಕಂಪ್ಯೂಟರ್ ನ ಯು ಏಸ್ ಬಿ ಕಿಂಡಿಗೆ ಜೋಡಿಸುವ ಮೂಲಕ ಚಾರ್ಜ್ ಮಾಡಲು ಬರುತ್ತದೆ. ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಆಗಲು ಎಂಟರಿಂದ ಒಂಬತ್ತು ಗಂಟೆಗಳ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ನೀಲಿ ಬಣ್ಣದ ನಾಲ್ಕು ಇಂಡಿಕೇಟರ್ ಗಳು ಬ್ಯಾಟರಿಯ ಚಾರ್ಜ ಪ್ರಮಾಣ ತೋರಿಸುತ್ತದೆ.
ಪವರ್ ಬ್ಯಾಂಕ್ ಚಾರ್ಜ ಮಾಡುವಾಗ ಮತ್ತು ಬಿಸಿ ಆಗಲಿಲ್ಲ ಹೀಗಾಗಿ ಇದು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಎನ್ನುವಲ್ಲಿ ಸಂಶಯವಿಲ್ಲ.
ಮೂರು ಚಾರ್ಜ ಪಾಯಿಂಟ್ ಇದೆಯೆಂದು ಮೂರು ಮೊಬೈಲ್ ಚಾರ್ಜ ಹಾಕಿದಾಗ ಚಾರ್ಜ ಆಗುವ ಪ್ರಮಾಣ ಸಹಜವಾಗಿಯೇ ನಿಧಾನವಾಗುತ್ತದೆ. ಒಂದು ಮೊಬೈಲ್ ಚಾರ್ಜ ಹಾಕಿದಾಗ ತ್ವರಿತವಾಗಿ ಚಾರ್ಜ ಆಗಿದೆ.
ಪವರ್ ಬ್ಯಾಂಕ ಖರೀದಿ ಮಾಡುತ್ತಿದ್ದೀರಾ?
ಪವರ್ ಬ್ಯಾಂಕ್ ಖರೀದಿಸಲು ಆನ್ ಲೈನ್ ಅಂಗಡಿಗಳ ಮೊರೆ ಹೂಗುವದು ಉತ್ತಮ.ಅಲ್ಲಿ ಗುಣಮಟ್ಟ ಪರೀಕ್ಷಿಸಿದ
ಪವರ್ ಬ್ಯಾಂಕ್ ಮಾತ್ರ ಮಾರಾಟಕ್ಕೆ ಲಭ್ಯ ವಿರುತ್ತದೆ.ಆನ್ಲೈನ್ ನಲ್ಲಿ ಪವರ್ ಬ್ಯಾಂಕ್
ಗೆ ಕೊಟ್ಟಿರುವ ranking ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.
ರಸ್ತೆಯ ಬದಿಯಲ್ಲಿ ಪವರ್ ಬ್ಯಾಂಕ್ಅನ್ನು ಖಂಡಿತವಾಗಿ ಕೊಳ್ಳಲಬೇಡಿ. ಅಗ್ಗದ ದರ ಪವರ್ ಬ್ಯಾಂಕ್ ಕಳಪೆ ಗುಣಮಟ್ಟದ ಬ್ಯಾಟರಿ ಹೊಂದಿರಬಹುದು. ಸ್ಪೋಟಗೊಳ್ಳಬಹುದು.ಅದಲ್ಲದೇ ನಿಮ್ಮ ಪೋನ್ ಚಾರ್ಜ ಹಾಕಿದಾಗ ಅಸಮರ್ಪಕ ವಿದ್ಯುತ್ ಪೂರೈಸುವ ಸಂಭವವಿದೆ.
ಕಡಿಮೆ ಹಣಕ್ಕೆ ರಾಜಿಯಾಗದೇ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಖರೀದಿಸಿ ನಿಮ್ಮ ಮೌಲ್ಯಯುತ ಸಾಮಗ್ರಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ.
www.nettantra.blogspot.in ನಲ್ಲಯೂ ಈ ಹಿಂದಿನ ಲೇಖನಗಳು ಲಭ್ಯವಿದೆ.
BOX ITEM,1................._______ _____
mAh ಮಿಲಿ ಎಂಪಿಯರ್ ಪರ್ ಹವರ್
ಅಂದರೆ ಪ್ರತಿ ತಾಸಿಗೆ
ಬ್ಯಾಟರಿಯ ಶಕ್ತಿಯನ್ನು ರವಾನಿಸುವ ಸಾಮರ್ಥ್ಯವನ್ನು ಅಳೆಯುವ ಮಾನ.
BOX ITEM 2_____________________
ಪವರ್ ಬ್ಯಾಂಕ್ ಆಪಲ್ ಕಂಪನಿಯ ಐಪೋನ್,ಐಪ್ಯಾಡ್,ಐಪೊಡ್ ಗಳನ್ನು ಚಾರ್ಜ ಮಾಡುತ್ತದೆ.ಅಲ್ಲದೇ ಮಿನಿ ಬ್ಲೂಟೂಥ್ ಸ್ಪೀಕರ್ ಕೂಡಾ ಚಾರ್ಜ ಹಾಕಲು ಬರುತ್ತದೆ.
No comments:
Post a Comment