ಬಹು ಉಪಯೋಗಿ ಜಿಯೋ ಫೈ
ಜಿಯೋ 4ಜಿ ನೆಟ್ವರ್ಕ್ ನಮ್ಮಲ್ಲಿ ಶುರುವಾದ ಕೂಡಲೇ ಇಂಟರ್ನೆಟ್ ಅನ್ನು ಮೊಬೈಲ್ ಮೂಲಕ ಬಳಸುವವರು ಹಾಗೂ ಬಳಸುವ ಸಮಯವೂ ಅಧಿಕವಾಯಿತು!.ಜಿಯೋ ಕಂಪನಿಯ ದರ ಸಮರದ ಪರಿಣಾಮವಾಗಿ ಇತರ ಕಂಪನಿಯವರ ನೆಟ್ ಪ್ಯಾಕ್ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು ಸತ್ಯ.
ಬಹುಉಪಯೋಗಿ ಜಿಯೋ ಫೈ.
ರೂ 1999 ದರ ಹೊಂದಿದ್ದ ಜಿಯೋ ಫೈ ಪೆಸ್ಟಿವ್ ಆಫರ್ ನಿಂದ ಇತ್ತೀಚಿಗೆ ರೂ 999 ಕ್ಕೆ ದೊರಕುತ್ತಿದೆ. ಇದು ನಿಜಕ್ಕೂ ಒಳ್ಳೆಯ ಕೊಡುಗೆಯಾಗಿದ್ದು ಬಳಸಲೂ ಸುಲಭವಾಗಿದೆ. ಪುಟ್ಟದಾದ ಜಿಯೋ ಫೈ ಪೋರ್ಟೆಬಲ್ ವೈಫೈ ರೂಟರ್ ಆಗಿ ಚನ್ನಾಗಿ ಕಾರ್ಯ ನಿರ್ವಹಿಸುತ್ತದೆ.
ಅತ್ಯಂತ ಕಡಿಮೆ ಜಿಯೂ ನೆಟ್ವರ್ಕ ಇರುವ ಸ್ಥಳ ದಲ್ಲಿ ನಿಮ್ಮ ಮೊಬೈಲ್ ಸೆಟ್ ನಲ್ಲಿ ಸರಿಯಾಗಿ ನೆಟ್ ಸಂಪರ್ಕ ಬರದಿದ್ದರೂ ಜಿಯೋ ಫೈ ಅತ್ಯಂತ ತ್ವರಿತ ವೇಗದಲ್ಲಿ ಇಂಟರ್ನೆಟ್ ದತ್ತಾಂಶ ಒದಗಿಸುತ್ತದೆ. ಜಿಯೋ ಫೈ ಶಕ್ತಿಶಾಲಿಯಾಗಿದ್ದು ಇದರಿಂದ ಏಕಕಾಲಕ್ಕೆ ಮೂವತ್ತೊಂದು ಜನರು ತಮ್ಮ ಡಿವೈಸ್ ಗಳಲ್ಲಿ ಇಂಟರ್ನೆಟ್ ಸೇವೆಯನ್ನು ಬಳಸಬಹುದು.
ಈಗಾಗಲೇ ನಿಮ್ಮ ಬಳಿ ಜಿಯೋ ಸಿಮ್ ಇದ್ದರೆ ನೀವು ಜಿಯೋ ಫೈ ಖರೀದಿಸಿ ಈಗ ಬಳಸುತ್ತಿರುವ ಸಿಮ್ ಅನ್ನು ಜಿಯೋ ಫೈ ಗೆ ಅಳವಡಿಸಿ ಕೊಂಡು ಬಳಸಬಹುದು.ಈ ವೈ ಫೈ ರೂಟರ್ ನಿಂದ ನಿಮ್ಮ ಪೋನ್ ಕನೆಕ್ಟಮಾಡಿ ನಿಮ್ಮ ಪೋನ್ ನಲ್ಲಿ ಯಾವುದೇ ಸಿಮ್ ಇಲ್ಲದೇ ಎಲ್ಲ ಕಡೆ ಪೋನ್ ಕರೆ ಮಾಡಬಹುದು.
ನಮ್ಮ ವಾಸಸ್ಥಳದಲ್ಲಿ ಯಾವ ಯಾವ ಕಂಪನಿಯ ಸಿಗ್ನಲ್ ಬರಬಹುದು ಎಂಬ ಕುತೂಹಲ ಈಗ ನಿಮಗೆ ಬಂದಿದ್ದರೆ ನೀವು ಮೊಬೈಲ್ ಸಿಗ್ನಲ್ ಸರ್ಚಮಾಡಬೇಕು.ಈ ಕೆಳಗಿನ ವಿಧಾನದಿಂದ ನೀವೇ ಲಭ್ಯವಿರುವ ಸಿಗ್ನಲ್ ಗಳನ್ನು ಪರೀಕ್ಷಿಸಿ ಕೊಳ್ಳಬಹುದು.
ವಿಧಾನ:
ನಿಮ್ಮ ಪೋನ್ ಸೆಟ್ಟಿಂಗ್ಸ ತೆರೆಯಿರಿ>ನೆಟ್ ವರ್ಕ ಸೆಟ್ಟಿಂಗ್>ನೆಟ್ವರ್ಕ್ ಆಪರೇಟರ್ ಆಯ್ಕೆಮಾಡಿ ಅಲ್ಲಿ ನೆಟ್ವರ್ಕ್ ಸರ್ಚ ಮಾಡಿ
ನಿಮ್ಮ ಪೋನ್
ಲಭ್ಯವಿರುವ ಕಂಪನಿಯ ಸಿಗ್ನಲ್ ತೋರಿಸುತ್ತದೆ. ನಂತರ ನಿಮ್ಮ ಆಯ್ಕೆಯ ಸಿಮ್ ಖರೀದಿಸಿ ನೆಟ್ ಲೋಕದಲ್ಲಿ ಜಾಲಾಡಿ!.
ಏನಿದು 4ಜಿ?
ಟೆಲಿಕಾಂ ಕ್ಷೇತ್ರದಲ್ಲಿ ಜಿ ಎಂದರೆ ಜನರೇಷನ್ (ತಲೆಮಾರು) ಎಂದು ಅರ್ಥೈಸುತ್ತಾರೆ.ಈಗ 3ಜಿ ಸೇವೆಯ ಯಶಸ್ವೀ ಸೇವೆಯ ನಂತಮೂಲಕ 4ಜಿ ಲಭ್ಯವಿದೆ. ಮತ್ತೂ ಮುಂದುವರಿದು 5ಜಿ ಪ್ರಯೋಗವೂ ನೆಡೆಯಿತ್ತಿದೆ.
4ಜಿ ಸೇವೆಯು 3ಜಿ ಸೇವೆಗಿಂತ ಮೂವತ್ತು ಪಟ್ಟು ಅಧಿಕವೇಗದಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಓಎಲ್ಟಿಇ ಎಂಬ ಸೇವೆ ಇದೆ. ಇದರ ಮೂಲಕ ನೆಟ್ ಪ್ಯಾಕ್ ದರದಲ್ಲೇ ಕರೆಯನ್ನು ವ್ಯಾಲಿಡಿಟಿಯ ರಿಚಾರ್ಜನ ರಗಳೆ ಇಲ್ಲದೇ ಮಾಡಬಹುದು.
ಈ ಸೌಲಭ್ಯಗಳು ದೊರೆಯಬೇಕಾದರೆ ಎಲ್ಲಡೆ 4ಜಿ ಟವರ್ ಕವರೇಜ್ ಅತ್ಯಗತ್ಯ.
(ಇಂದಿನ ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)


No comments:
Post a Comment