ಕಳೆದ ಎರಡು ಲೇಖನಗಳಿಂದ ನೀವು ಮೊಬೈಲ್‌ಗೆ ಇಂಟರನೆಟ್ ಸಂಪರ್ಕವನ್ನು ಹೊಂದುವ ಬಗೆಯನ್ನು ತಿಳಿದುಕೊಂಡಿದ್ದೀರಿ. ಈಗ ಇಂಟರ್‌ನೆಟ್‌ನ ಸಂಪರ್ಕದಿಂದ ನಿಮ್ಮ ಫೋನ್ ಅನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳುವುದನ್ನು ತಿಳಿಯೋಣ.
ಸ್ಮಾರ್ಟ್ ಫೋನ್ ಅನ್ನು ಸುಮಾರು ನೂರಕ್ಕೆ ಎಪ್ಪತೈದು ಮಂದಿ ಜೀಮೇಲ್ ಖಾತೆ ಬಳಸಿ ಇನ್ನು ಇಪ್ಪತೈದು ಮಂದಿ ಯಾವುದೇ ಖಾತೆ ಇಲ್ಲದೇ ಒಂದು ಸಾಮಾನ್ಯ ಫೋನ್‌ನಂತೆ ಬಳಸುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಕೆಲಸಗಳು ಸುಲಲಿತವಾಗಿ ಆಗಬೇಕೆಂದರೆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲೇಬೇಕು, ಇದು ಅನಿವಾರ್ಯ ಕೂಡಾ.
ಅಂಡ್ರಾಯ್ಡ ಫೋನ್ ಕಾರ್ಯನಿರ್ವಹಿಸುವ ವಿಧಾನ.
ಟಚ್‌ಸ್ಕ್ರೀನ್ ಫೋನ್ ಗಾಜಿನಿಂದ ಮಾಡಲ್ಪಟ್ಟ ಪರದೆ ಆಗಿದ್ದು ಇಲ್ಲಿ ನಿರಂತರ ವಿದ್ಯುತ್ ವಾಹಕಗಳು ಸಂಚರಿಸುತ್ತವೆ. ನಿಮ್ಮ ಬೆರಳು ಫೋನ್ ಪರದೆಯನ್ನು ಸ್ಪರ್ಶಿಸಿದ ತಕ್ಷಣ ಎರಡು ವಿದ್ಯುತ್ ವಾಹಕಗಳು ಪರಸ್ಪರ ಸೇರಿ ಕಾರ್ಯ ಮಾಡುತ್ತದೆ. ಕೇವಲ ಸ್ಪರ್ಷಿಸಿದರೆ ಸಾಕು, ಸ್ಕ್ರೀನ್ ಅನ್ನು ಗಟ್ಟಿಯಾಗಿ ಒತ್ತುವ ಅವಶ್ಯಕತೆಯೇ ಇರುವುದಿಲ್ಲ.
ಗೂಗಲ್‌ನವರು ಸಿದ್ಧಪಡಿಸಿದ ಅಂಡ್ರಾಯ್ಡ್ ತಂತ್ರಾಂಶದ ಮೂಲಕ ಕೆಲಸ ಮಾಡುವ ಫೋನ್ ಅಂಡ್ರಾಯ್ಡ್ ಫೋನ್ ಆಗಿದೆ. ಆಪಲ್ ಕಂಪನಿಯ ಐಫೋನ್ ಹಾಗೂ ಇತರ ಗ್ಯಾಜೆಟ್ ಗಳು ಐಓಎಸ್ ತಂತ್ರಾಂಶದ ಆಧಾರದ ಮೆಲೆ ಕೆಲಸ ಮಾಡುತ್ತದೆ. ಇದನ್ನು ನೀವು ಐಫೋನ್, ಐಪ್ಯಾಡ್‌ಗಳಲ್ಲಿ ನೋಡಬಹುದು.
ಪ್ಲೇ ಸ್ಟೋರ್ ಸಂಪರ್ಕಿಸುವ ವಿಧಾನ:
ಈ ಲೇಖನದ ಮೊದಲೇ ತಿಳಿಸಿದಂತೆ ಬಹಳಷ್ಟು ಜನರು ಜೀಮೇಲ್ ಖಾತೆ ಇಲ್ಲದೇ ಅಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದಾರೆ. ಹೀಗೆ ಬಳಸುವುದರಿಂದ ಪ್ಲೇಸ್ಟೋರ್‌ನ ಸರಿಯಾದ ಬಳಕೆ ಆಗುವುದೇ ಇಲ್ಲಾ. ಒಂದು ಸಮೀಕ್ಷೆಯ ಪ್ರಕಾರ ಸಪ್ಟೆಂಬರ್ 2017ರ ತನಕ ಪ್ಲೇಸ್ಟೋರ್‌ನಲ್ಲಿ 33ಲಕ್ಷ ಅಪ್ಲಿಕೇಶನ್ (ತಂತ್ರಾಂಶ) ಲಭ್ಯವಿದೆ!. ಇವುಗಳಲ್ಲಿ ನಮಗೆ ಉಪಯುಕ್ತವಾದ ಅಪ್ಲಿಕೇಶನ್ ಪಡೆಯಲು ಜೀಮೇಲ್ ಅಕೌಂಟ್ ಹೊಂದಿರಬೇಕು. ನಿಮ್ಮ ಫೋನಿನಲ್ಲಿ ಪ್ಲೇಸ್ಟೋರ್ ಐಕಾನನ್ನು ತೆರೆದು ಅಲ್ಲಿ ಜೀಮೇಲ್ ಖಾತೆಯ ಹೆಸರು ಪಾಸ್‌ವರ್ಡ್ ನೋಂದಾಯಿಸಿದರೆ ಅಧಿಕೃತವಾಗಿ ನೀವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೀಮೇಲ್ ಖಾತೆಯನ್ನು ಹೊಂದಿದ್ದರೆ ನಿಮ್ಮ ಫೋನ್ ಕಾಂಟ್ಯಾಕ್ಟ್‌ಅನ್ನು ಅಂತರ್ಜಾಲಕ್ಕೆ ನಿಮ್ಮ ಭದ್ರತೆಯಲ್ಲಿ ಸೇರಿಸಿಡಬಹುದು. ಫೋನ್ ಕಳೆದಾಗ, ಹೊಸ ಫೋನ್ ಖರೀದಿಸಿದಾಗ ಮತ್ತೆ ನೀವು ಜೀಮೇಲ್ ಖಾತೆ ನಮೂದಿಸಿದರೆ ನಿಮ್ಮ ಹಿಂದಿನ ಫೋನ್‌ನಲ್ಲಿನ ಎಲ್ಲಾ ದಾಖಲೆಗಳೂ ಪುನಃ ಸ್ಥಾಪಿಸಲ್ಪಡುತ್ತವೆ. ನೀವು ತೆಗೆದ ಫೋಟೊಗಳನ್ನೂ ಕೂಡ ಜೀಮೇಲ್‌ನಲ್ಲಿ ಶೇಖರಿಸಿಡಬಹುದು. ಗೂಗಲ್ ಪ್ರತಿ ಖಾತೆದಾರನಿಗೆ 15ಜಿಬಿ ಸ್ಥಳಾವಕಾಶ ಕೊಡುತ್ತಿದೆ. ಇಲ್ಲಿ ನಿಮ್ಮ ಡಾಟಾಗಳನ್ನು ಇಟ್ಟುಕೊಳ್ಳಬಹುದು.
ಡೌನ್‌ಲೋಡ್ ಮಾಡಿ: ಪ್ಲೇಸ್ಟೋರ್‌ನಲ್ಲಿ ನಿಮ್ಮ ಜೀಮೇಲ್ ಖಾತೆಯನ್ನು ನಮೂದಿಸಿ ನಿಮಗೆ ಅನುಕೂಲವಾಗುವಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ಲೇಸ್ಟೋರ್‌ನಲ್ಲಿ ಎಲ್ಲ ವಯೋಮಾನದವರಿಗೂ ಅವರವರದೇ ಅಭಿರುಚಿಗೆ ತಕ್ಕಂತಹ ಆಪ್‌ಗಳಿವೆ. ಕೆಲವು ಉಚಿಯವಾಗಿ ಸಿಗುತ್ತವೆ. ಹೆಚ್ಚಿನ ಗುಣಮಟ್ಟದ ಆಪ್ ಬೇಕಾದಲ್ಲಿ ಹಣಕೊಟ್ಟು ಕೊಳ್ಳಬಹುದು. ಈಗ ಉಚಿತವಾಗಿ ಸಿಗುವ ಅಪ್ಲಿಕೇಶನ್ ಪ್ರಮಾಣ ಹೆಚ್ಚಿದೆ. ಜನರಿಗೆ ಹೆಚ್ಚು ಪ್ರಯೋಜನವಾಗಲೆಂದು ಬಹುತೇಕ ಸಂಸ್ಥೆಗಳು ಉಚಿತವಾಗಿ ಆಪ್ ಬಿಡುಗಡೆ ಮಾಡಿ ಸಮಾಜಕ್ಕೆ ಸೇವೆ ಮಾಡುತ್ತಿದ್ದಾರೆ.
Last calls :- ಫೋನ್‌ನಲ್ಲಿ ಸುಲಭವಾಗಿ ರೀಡೈಲ್ ಮಾಡಲು ಈ ಆಪ್ ತುಂಬಾ ಸಹಾಯಮಾಡುತ್ತದೆ. ಹೊಸದಾಗಿ ಫೋನ್ ಬಳಸುವವರಿಗೂ ಇದನ್ನು ಡೌನ್‌ಲೋಡ್ ಮಾಡಿಕೊಂಡಲ್ಲಿ ಆರಾಮವಾಗಿ ಕೇವಲ ಒಂದು ಟಚ್ನಲ್ಲಿ ಲಾಸ್ಟ್ ಕಾಲ್ಸ್ ಪಟ್ಟಿ ತೆಗೆದು ನೋಡಬಹುದು. ಈ ಆಪ್‌ನ ಲಿಂಕ್ goo.gl/8urRzH ನೀವು ಪ್ಲೇಸ್ಟೋರ್‌ನಲ್ಲಿ Last calls ಎಂದು ಸರ್ಚ್ ಮಾಡಿದರೂ ಈ ಆಪ್ ನಿಮಗೆ ದೊರಕುತ್ತದೆ.
Sunday, November 12, 2017
ಸ್ಮಾರ್ಟ್ ಫೋನ್ ಬಳಕೆಗೆ ಒಂದಷ್ಟು ಸಲಹೆ
Subscribe to:
Post Comments (Atom)
No comments:
Post a Comment