Thursday, February 1, 2018

ಪವರ್ ಬ್ಯಾಂಕ್

ನಿರಂತರ ವಿದ್ಯುತ್ ಸಂಪರ್ಕದಿಂದ ಅಂತರ್ಜಾಲ ವ್ಯವಸ್ಥೆಯು ನಡೆಯುತ್ತಿದೆ. ಅಲ್ಲಿ ಕ್ಷಣಕಾಲ ವಿದ್ಯುತ್ ಶಕ್ತಿ ಸಂಚಲನೆ ನಿಂತರೂ ಮಾಹಿತಿಯ ಸಂವಹನೆ ಕಡಿತಗೊಳ್ಳುತ್ತದೆ.ಹಾಗೆಯೇ ನಾವು ಬಳಸುವ ಮೊಬೈಲಿನ ಬ್ಯಾಟರಿ ಡೌನ್ ಆದಾಗ  ನಮ್ಮ ಎಲ್ಲ ಸಂಪರ್ಕ‌ವೂ ಕಡಿತಗೊಳ್ಳುತ್ತದೆ.ವಿಷೇಶವಾಗಿ ದೂರದ ಊರಿಗೆ ಪ್ರಯಾಣಸುವಾಗ ಮತ್ತು ಕರೆಂಟ್ ಕೈ ಕೊಟ್ಟಾಗ ಮೊಬೈಲ್‌ ಚಾರ್ಜ ಮಾಡುವದು ದೊಡ್ಡ ಸಮಸ್ಯೆಯಾಗುತ್ತದೆ.ಈ ಸಂಧರ್ಭದಲ್ಲಿ ಸುಲಭವಾಗಿ ಪವರ್ ಬ್ಯಾಂಕ್ ಮೂಲಕ ಮೊಬೈಲ್ ಚಾರ್ಜ ಮಾಡಿಕೊಳ್ಳ ಬಹುದು.ಅಲ್ಲದೇ
 ಮೊಬೈಲ್ ನಲ್ಲಿ ಇಂಟರ್ ನೆಟ್ ಪ್ಯಾಕ್ ಅನ್ನು ಬಳಸುವಾಗ ಮೊಬೈಲ್ ನ ಬ್ಯಾಟರಿ ಯು ಬಹುಬೇಗ ಖಾಲಿಯಾಗುತ್ತದೆ.ನಗರ ಸಂಚಾರ ಮಾಡುತ್ತಿರುವಾಗ   ಪವರ್ ಬ್ಯಾಂಕ್ ನ ಮೂಲಕ ಯು ಎಸ್ ಬಿ ವೈಯರ್ ಪಿನ್   ಮೊಬೈಲ್ ಗೆ ಜೋಡಿಸಿಟ್ಟು ನಮ್ಮ ಬ್ಯಾಗ್ ನಲ್ಲೇ  ಚಾರ್ಜ್ ಮಾಡಬಹುದು.


ಪವರ್ ಬ್ಯಾಂಕ್ ಖರೀದಿಗೆ ಸಲಹೆ:
ನಾನು ಇಂಟೆಕ್ಸ್‌ ಕಂಪನಿಯ PB11K
11000mAh ಸಾಮರ್ಥ್ಯ ದ ಪವರ್ ಬ್ಯಾಂಕ್ ಬಳಸುತ್ತಿದ್ದೇನೆ.ಈ ಪವರ್ ಬ್ಯಾಂಕ್ ಒಮ್ಮೆ ಚಾರ್ಜ್ ಮಾಡಿದರೆ ಮೂರು ಬಾರಿ ಮೊಬೈಲ್ ಚಾರ್ಜ್ ಮಾಡಲು ಸಾಕಾಗುತ್ತದೆ.ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ ಎಂದರೆ ಅದು ಅತಿಶಯೋಕ್ತಿಯಲ್ಲ.

Intex PB11K ಪವರ್ ಬ್ಯಾಂಕ್ ನ ಒಳಗೆ ಐದು ಶಕ್ತಿ ಶಾಲಿ ರೀಚಾರ್ಜೇಬಲ್ ಶಲ್ಲ್ ಗಳನ್ನು ಹೊಂದಿರುವ ಇದು ಏಕಕಾಲಕ್ಕೆ ಮೂರು ಮೊಬೈಲ್ ಗಳನ್ನು ಚಾರ್ಜ ಮಾಡಿಕೊಳ್ಳ ಬಹುದು ಇದು 5ವೋಲ್ಟಿನ 2.1A, 2.1A,ಹಾಗೂ 1 A. ಶಕ್ತಿಯನ್ನು ಹೊರಹಾಕುವ
ಮೂರು ಯು ಎಸ್ ಬಿ ಕಿಂಡಿಯನ್ನು ಹೊಂದಿದ್ದು ನಿಮ್ಮ ಪೂನ್ ನ ಅವಶ್ಯಕತೆ ಗೆ ತಕ್ಕಂತೆ ಜಾರ್ಜ್‌ ಗೆ ಅಳಡಿಸಬಹುದು. ಇದಲ್ಲದೇ ಈ ಪವರ್ ಬ್ಯಾಂಕ್ ಹೊರಗಿನ ಬದಿಯಲ್ಲಿ ಮಿನಿ ಟಾರ್ಚ ಕೂಡಾ ಇದೆ.ಕತ್ತಲ್ಲಿ ಇದನ್ನು ಬಳಸಿ ಆರಾಮವಾಗಿ ಓಡಾಡಬಹುದು. 

ಪವರ್ ಬ್ಯಾಂಕ್ ಅನ್ನು ನಿಮ್ಮ ಮೊಬೈಲ್ ಚಾರ್ಜರ್ ಅಥವಾ ಕಂಪ್ಯೂಟರ್ ನ ಯು ಏಸ್ ಬಿ ಕಿಂಡಿಗೆ ಜೋಡಿಸುವ ಮೂಲಕ ಚಾರ್ಜ್‌ ಮಾಡಲು ಬರುತ್ತದೆ. ಒಂದು ಬಾರಿ ಸಂಪೂರ್ಣವಾಗಿ ಚಾರ್ಜ್ ಆಗಲು ಎಂಟರಿಂದ ಒಂಬತ್ತು ಗಂಟೆಗಳ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ನೀಲಿ ಬಣ್ಣದ ನಾಲ್ಕು ಇಂಡಿಕೇಟರ್ ಗಳು ಬ್ಯಾಟರಿಯ ಚಾರ್ಜ ಪ್ರಮಾಣ ತೋರಿಸುತ್ತದೆ.

ಪವರ್ ಬ್ಯಾಂಕ್ ಚಾರ್ಜ ಮಾಡುವಾಗ ಮತ್ತು   ಬಿಸಿ ಆಗಲಿಲ್ಲ ಹೀಗಾಗಿ ಇದು ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಎನ್ನುವಲ್ಲಿ ಸಂಶಯವಿಲ್ಲ.
ಮೂರು ಚಾರ್ಜ ಪಾಯಿಂಟ್‌ ಇದೆಯೆಂದು ಮೂರು ಮೊಬೈಲ್ ಚಾರ್ಜ ಹಾಕಿದಾಗ ಚಾರ್ಜ ಆಗುವ ಪ್ರಮಾಣ ಸಹಜವಾಗಿಯೇ ನಿಧಾನವಾಗುತ್ತದೆ. ಒಂದು ಮೊಬೈಲ್ ಚಾರ್ಜ ಹಾಕಿದಾಗ ತ್ವರಿತವಾಗಿ ಚಾರ್ಜ ಆಗಿದೆ.



ಪವರ್ ಬ್ಯಾಂಕ ಖರೀದಿ ಮಾಡುತ್ತಿದ್ದೀರಾ?

ಪವರ್ ಬ್ಯಾಂಕ್ ಖರೀದಿಸಲು ಆನ್ ಲೈನ್ ಅಂಗಡಿಗಳ ಮೊರೆ ಹೂಗುವದು ಉತ್ತಮ.ಅಲ್ಲಿ ಗುಣಮಟ್ಟ ಪರೀಕ್ಷಿಸಿದ
ಪವರ್ ಬ್ಯಾಂಕ್ ಮಾತ್ರ ಮಾರಾಟಕ್ಕೆ ಲಭ್ಯ ವಿರುತ್ತದೆ.ಆನ್ಲೈನ್ ನಲ್ಲಿ ಪವರ್ ಬ್ಯಾಂಕ್
ಗೆ ಕೊಟ್ಟಿರುವ ranking ಅನ್ನು ಗಮನದಲ್ಲಿಟ್ಟುಕೊಂಡು ಖರೀದಿಸಿ.

ರಸ್ತೆಯ ಬದಿಯಲ್ಲಿ ಪವರ್ ಬ್ಯಾಂಕ್ಅನ್ನು ಖಂಡಿತವಾಗಿ ಕೊಳ್ಳಲಬೇಡಿ. ಅಗ್ಗದ ದರ ಪವರ್ ಬ್ಯಾಂಕ್ ಕಳಪೆ ಗುಣಮಟ್ಟದ ಬ್ಯಾಟರಿ ಹೊಂದಿರಬಹುದು. ಸ್ಪೋಟಗೊಳ್ಳಬಹುದು.ಅದಲ್ಲದೇ ನಿಮ್ಮ ಪೋನ್ ಚಾರ್ಜ ಹಾಕಿದಾಗ ಅಸಮರ್ಪಕ ವಿದ್ಯುತ್ ಪೂರೈಸುವ ಸಂಭವವಿದೆ.

ಕಡಿಮೆ ಹಣಕ್ಕೆ ರಾಜಿಯಾಗದೇ ಉತ್ತಮ ಗುಣಮಟ್ಟದ ಪವರ್ ಬ್ಯಾಂಕ್ ಖರೀದಿಸಿ ನಿಮ್ಮ ಮೌಲ್ಯಯುತ ಸಾಮಗ್ರಿಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ.

www.nettantra.blogspot.in ನಲ್ಲಯೂ ಈ ಹಿಂದಿನ  ಲೇಖನಗಳು ಲಭ್ಯವಿದೆ.


BOX ITEM,1.................____________
mAh  ಮಿಲಿ ಎಂಪಿಯರ್ ಪರ್ ಹವರ್

ಅಂದರೆ ಪ್ರತಿ ತಾಸಿಗೆ
 ಬ್ಯಾಟರಿಯ ಶಕ್ತಿಯನ್ನು ರವಾನಿಸುವ ಸಾಮರ್ಥ್ಯವನ್ನು ಅಳೆಯುವ ಮಾನ. 


BOX ITEM 2_____________________

ಪವರ್ ಬ್ಯಾಂಕ್ ಆಪಲ್ ಕಂಪನಿಯ ಐಪೋನ್,ಐಪ್ಯಾಡ್,ಐಪೊಡ್ ಗಳನ್ನು ಚಾರ್ಜ ಮಾಡುತ್ತದೆ.ಅಲ್ಲದೇ ಮಿನಿ ಬ್ಲೂಟೂಥ್ ಸ್ಪೀಕರ್ ಕೂಡಾ ಚಾರ್ಜ ಹಾಕಲು ಬರುತ್ತದೆ.













Thursday, December 21, 2017

ಮಕ್ಕಳ ಕಲಿಕೆಗೆ,ಮನೋರಂಜನೆಗೆ : ಐಪ್ಯಾಡ್


ಆ್ಯಪಲ್ ಕಂಪನಿಯು ತನ್ನದೇ ಆದ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಮ್)  ಮತ್ತು ಗ್ರಾಹಕರ ಆದ್ಯತೆಗೆ ಒತ್ತು ಕೊಟ್ಟಿದ್ದರಿಂದ ಆ್ಯಪಲ್ ನ  ಉತ್ಪಾದನೆಗಳಾದ ಕಂಪ್ಯೂಟರ್‌, ಐಪೋನ್ ,ಐಪಾಡ್‌, ಐಪ್ಯಾಡ್  ಮನೆಮಾತಾಗಿದೆ.
ದರ ದುಬಾರಿ ಆದರೂ ತನ್ನ ವಿಶಿಷ್ಟವಾದ ವಿನ್ಯಾಸದದಿಂದ ಬಹು ಜನಪ್ರಿಯತೆ ಗಳಿಸಿರುವ ಐಪ್ಯಾಡ್ ಎರಡು ಗಾತ್ರದಲ್ಲಿ ಸಿಗುತ್ತವೆ.
9.7 ಇಂಚಿನ ಐಪ್ಯಾಡ್ ಮನೆಬಳಕೆಗೆ ಅತ್ಯುತ್ತಮವಾಗಿದೆ.(rs 33,300)ಇದು ರೆಟಿನಾ ಡಿಸ್ಪ್ಲೇ ಹೊಂದಿದೆ.ಇದರಿಂದ ಬದಿಯಿಂದ ನೋಡಿದರೂ ಸ್ಪಷ್ಟವಾಗಿ ಚಿತ್ರ ವೀಕ್ಷಿಸಬಹುದು. ಅಲ್ಲದೇ ಐಪ್ಯಾಡ್ ನ ಗುಣಮಟ್ಟದ ಡಿಸ್ಪ್ಲೆ ಕಣ್ಣಿಗೆ ಆಯಾಸ ಉಂಟು ಮಾಡುವದಿಲ್ಲ.  



ಉತ್ತಮ ಕ್ಯಾಮರಾ ಹೊಂದಿದ್ದು ಹೊರಾಂಗಣದಲ್ಲಿ ಉತ್ತಮ ಗುಣಮಟ್ಟದ ಪೋಟೋ ಮತ್ತು ವೀಡಿಯೋ ಚಿತ್ರೀಕರಣ ಮಾಡಬಹುದು. ಸಂಗೀತ ಆಲಿಸಲು ಇದರಲ್ಲಿ ಒಳ್ಳೆಯ ಸ್ಪೀಕರ್ ಅಳವಡಿಸಿದ್ದು ಧ್ವನಿಯ ಗುಣಮಟ್ಟ ಅಧ್ಬುತವಾಗಿದೆ.
  ಶಕ್ತಿಶಾಲಿ ಬ್ಯಾಟರಿಯನ್ನು ಒಳಗೊಂಡಿರುವ 470 ಗ್ರಾಂ ತೂಕದ ಐಪ್ಯಾಡ್ ನೋಡಲು ಆಕರ್ಷಕವಾಗಿದೆ.ಮುಂಭಾಗದಲ್ಲಿ ಒಂದು ಸಾಫ್ಟ್ ಬಟನ್ ಕೊಟ್ಟಿದ್ದಾರೆ ಇದು ಬ್ಯಾಕ್ ಅಥವಾ ಹೋಮ್ ಆಪ್ಷನ್ ಗೆ ಹೋಗಲು ಬಳಕೆಯಾಗುತ್ತದೆ. ವಾಲ್ಯೂಮ್ ಬಟನ್ ಐಪ್ಯಾಡಿನ ಅಂಚಿನಲ್ಲಿದೆ. ಇಂಟರ್ನೆಟ್ ಬಳಕೆಗೆ
ಸಿಮ್ ಹಾಕಿ ಉಪಯೋಗಿಸುವ ಮತ್ತು ಕೇವಲ ವೈಪೈಯೊಂದೇ ಇರುವ ವಿವಿಧ ಮೆಮೋರಿ ಸಾಮರ್ಥ್ಯದ ಐಪ್ಯಾಡ್ ಗಳು ಆನ್ಲೈನ್ ನಲ್ಲಿ ದೊಡ್ಡ ನಗರಗಳಲ್ಲಿ ಆ್ಯಪಲ್ ಡೀಲರ್ ಬಳಿಯಲ್ಲಿ ಲಭ್ಯವಿದೆ.
ಮಕ್ಕಳ ಕಲಿಕೆಗೆ:
ಆ್ಯಪಲ್ ನ ಆ್ಯಪ್ ಸ್ಟೋರ್ ನಲ್ಲಿ  ವಯಸ್ಸಿಗೆ ಅನುಗುಣವಾಗು  ಮಕ್ಕಳ ಕಲಿಕೆಗೆ ನೆರವಾಗುವ  ಸಾಕಷ್ಟು ಅಪ್ಲಿಕೇಶನ್ ಗಳಿವೆ.
ಬಣ್ಣಗಳ ಗುರುತಿವಿಕೆ,ಅಕ್ಷರಕಲಿಗೆ ಹಾಗೂ ಬುದ್ದಿಗೆ ಕಸರತ್ತು ನೀಡುವಂತಹ ಆಟಗಳೂ ಇವೆ. ಇಲ್ಲಿ ಲಭ್ಯವಿರುವ ಆ್ಯಪ್ಗಳು  ಗಾತ್ರದಲ್ಲಿ ದೊಡ್ಡದಿದ್ದು ಉತ್ತಮಗುಣಮಟ್ಟದಾಗಿರುತ್ತದೆ.






ಕಲರಿಂಗ್ ಮಾಡುವದು ಚಿತ್ರ ಬಿಡಿಸಲು ನೆರವಾಗುವ ಆಟಗಳು ಚನ್ನಾಗಿದೆ.(ಆಂಡ್ರಾಯ್ಡ್ ಮೊಬೈಲ್ ನ ಪ್ಲೇ ಸ್ಟೋನ್ ನಲ್ಲಿಯೂ ಈ ಬಗೆಯ ಆ್ಯಪ್ ಲಭ್ಯವಿದೆ.)
ಮನೋರಂಜನೆ.
ಐಪ್ಯಾಡಿನಲ್ಲಿ  ಪೇಸ್ ಬುಕ್ ಬಳಸಿದಾಗ ಹೊಸ ಬಗೆಯ ಅನುಭವವಾಗುತ್ತದೆ. ಕಣ್ಣಿಗೆ ಆಯಾಸವಾಗದಂತೆ ಅತ್ಯಂತ ಕಡಿಮೆ ಬೆಳಕಿನಲ್ಲಿ ಪೋಟೋಗಳು ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಕನ್ನಡದ ಅಕ್ಷರಗಳು ಅಪರೂಪಕ್ಕೆ ಸರಿಯಾಗಿ ಮೂಡುವದಿಲ್ಲ.ಕೆಲವೊಂದು ಒತ್ತಕ್ಷರದಲ್ಲಿ ಸ್ವಲ್ಪ ತೊಡಕಾಗುತ್ತದೆ.
ಉಳಿದಂತೆ ಸಿನೆಮಾ ,ಯೂಟ್ಯೂಬ್ ವೀಕ್ಷಿಸಲು ಸಮರ್ಪಕ ಸಾಧನೆಂದರೆ ಅತಿಶಯೋಕ್ತಿ ಎನಿಸುವದಿಲ್ಲ.

Monday, December 11, 2017

ಮೊಬೈಲ್ ಬಾಳಿಕೆಗೆ ತಂತ್ರೋಪಾಯ

ಚಾರ್ಜರ್ ನ ಪಿನ್ ನಿಮ್ಮ ಎಲ್ಲ ಬಗೆಯ ಪೋನಿಗೆ ಹೊಂದಬಹುದು  ಆದರೆ ಬ್ಯಾಟರಿಗಲ್ಲ!.
ಬಹಳಷ್ಟು ಜನರು ತಮ್ಮ ಪೋನ್ ಗಳನ್ನು ಚಾರ್ಜ ಮಾಡಲು ಯಾವುದಾದರೊಂದು ಚಾರ್ಜರ್ ಗೆ ಜೋಡಿಸಿ ನೆಮ್ಮದಿಯಿಂದ ಇರುತ್ತಾರೆ ಇದು ಬೆಲೆ ಬಾಳುವ ಪೋನಿಗೆ ಮಾರಕವಾಗಬಹುದಾಗಿದೆ.

 ಸಾಮಾನ್ಯವಾಗಿ ಸ್ಮಾರ್ಟ್ ಪೋನ್ ಗಳಲ್ಲಿ  5 ವೋಲ್ಟೇಜ್ ನ ಬ್ಯಾಟರಿ ಬಳಸುತ್ತಾರೆ. ಇದಕ್ಕೆ ತಕ್ಕುದಾದ ಚಾರ್ಜರ್ ಅನ್ನು ಕಂಪನಿಯವರು ಪೋನ್ ಜೊತೆಗೇ ಕೊಟ್ಟಿರುತ್ತಾರೆ ಇದನ್ನೇ ಕಡ್ಡಾಯವಾಗಿ ಬಳಸಬೇಕು. ಪೀಚರ್ ಪೋನ್ (ಕೀಪ್ಯಾಡ್ ಹೊಂದಿರುವ ಸಾದಾ ಪೋನ್)
3 ಅಥವಾ 3.7  ವೋಲ್ಟೇಜ್ ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಅದಕ್ಕೆ ಕಡಿಮೆ ಪ್ರಮಾಣದ ಚಾರ್ಜರ್ ಸಾಕಾಗುತ್ತದೆ. ಸ್ಮಾರ್ಟ್ ಪೋನಿನ ಚಾರ್ಜರ್ ಅನ್ನು  ಸಣ್ಣ ಮೊಬೈಲ್ ಗೆ ಬಳಸಿದಲ್ಲಿ ಬ್ಯಾಟರಿ ಯ ಆಯಸ್ಸು ಬೇಗ ಮುಗಿದು ಹೋಗುತ್ತದೆ.  
ಸಣ್ಣ ಮೊಬೈಲಿನ ಚಾರ್ಜರ್ ಸ್ಮಾರ್ಟ್ ಪೋನಿಗೆ ಬಳಸಿದಲ್ಲಿ ಚಾರ್ಜ ಆಗಲು ಸಹಜವಾಗಿಯೇ ಬಹಳ ಸಮಯ ಬೇಕಾಗುತ್ತದೆ.

ಮೊಬೈಲ್ ನ ಚಾರ್ಚ ಬೇಗ ನಿಲ್ಲದಿರುವದು,ಸ್ವಯಂಚಾಲಿತವಾಗಿ  ಸ್ಕ್ರೀನ್ ಆನ್ ಆಗುವದು ಮತ್ತು ಪೋನ್ ಸ್ವಿಚ್ ಆಪ್ ಆಗುವದು ಇವು ಬ್ಯಾಟರಿ ಡೆಡ್ ಆಗಲು ಬಂದಿರುವ ಲಕ್ಷಣಗಳು.
ಈ ರೀತಿಯ ಲಕ್ಷ ಣ ಕಂಡು ಬಂದಲ್ಲಿ ಹೊಸತಾದ ಬ್ಯಾಟರಿ ಖರೀದಿಸಿ.

ಮೊಬೈಲ್ ಬ್ಯಾಟರಿ  ಹೆಚ್ಚುಕಸಲಬಾಳಿಕೆ ಬರಬೇಕಾದರೆ ಹೀಗೆ ಮಾಡಿ.

ಹೆಚ್ಚು ಹೆಚ್ಚು ಅಪ್ಲಿಕೇಶನ್ ನಿಮ್ಮ ಪೋನಿನಲ್ಲಿ ಡೌನ್ ಲೋಡ್ ಮಾಡಿಕೊಂಡರೆ ಅದು ನಿಮ್ಮ ಪೋನ್ ಬ್ಯಾಟರಿ ಯನ್ನು ಬಳಸಿಕೊಳ್ಳುತ್ತದೆ. ಹಾಗಾಗಿ ಅವಶ್ಯಕತೆ ಇರುವ ಅಪ್ಲಿಕೇಶನ್ ಮಾತ್ರ ಇಟ್ಟುಕೊಳ್ಳಿ.ಜಾಸ್ತಿ ಆ್ಯಪ್ ಇದ್ದರೆ ಪೋನ್ ಮೆಮೋರಿ ಬಹುತೇಕ ಭಾಗ ಬಳಕೆಗೆ ಬರುವದಿಲ್ಲ.

ಕ್ಲೀನ್ ಮಾಸ್ಟರ್.
 ಚಾಕಲೇಟ್ ಕೊಂಡು ತಿಂದಾಗ ಅದರ ಸಿಪ್ಪೆ ಹೇಗೆ ನಮಗೆ ಅನುಪಯುಕ್ತವೋ ಹಾಗೆಯೇ ಸ್ಮಾರ್ಟಪೋನ್ ನಲ್ಲಿ ಒಂದು ವೀಡಿಯೋ ಅಥವಾ ಪೋಟೋ  ಡೌನ್‌ಲೋಡ್ ಆದಲ್ಲಿ ಅದಕ್ಕೆ ಪೂರಕವಾದ ಪೈಲ್ಗಳು
ಬರುತ್ತದೆ.ಇದಕ್ಕೆ ಜಂಕ್ ಪೈಲ್ ಎನ್ನುತ್ತಾರೆ.  ಅಂಡ್ರಾಯ್ಡ ಪೋನ್ ನಲ್ಲಿ ಇಂಟರ್ನೆಟ್ ವೀಕ್ಷಣೆ,ಫೇಸ್ ಬುಕ್ ಮತ್ತು ವಾಟ್ಸಪ್ ಬಳಸಿದಾಗ ಜಂಕ್ ಫೈಲ್ ಮೆಮೋರಿಯಲ್ಲಿ ಸಂಗ್ರಹ ವಾಗುತ್ತದೆ.

ಅನಗತ್ಯವಾದ ಜಂಕ್ ಫೈಲ್‌ಗಳನ್ನು ವಿಲೇವಾರಿಮಾಡಲು ಪ್ಲೇಸ್ಟೋರ್ ನಲ್ಲಿ ಹಲವಾರು ಆ್ಯಪ್ ಗಳಿವೆ. ಕ್ಲೀನ್ ಮಾಸ್ಟರ್ ಆ್ಯಪ್ ಚನ್ನಾಗಿದೆ. ಇದನ್ನು ರನ್ ಮಾಡಿದರೆ ಫೋನಿನ ಸ್ಟೋರೇಜ್ ನಲ್ಲಿ ಅಡಗಿರುವ ಅನುಪಯುಕ್ತ ಫೈಲ್ ಅನ್ನು ಅಳಿಸಿಹಾಕುತ್ತದೆ.


ಪೈಲ್ ಮೆನೆಜರ್ ಆ್ಯಪ್.


ಕೆಲವೊಂದು ಕಂಪನಿಯ ಪೋನಿನಲ್ಲಿ ಡೀಫಾಲ್ಟ್‌ ಆಗಿರುವ ಫೈಲ್ ಮೆನೆಜರ್ ಬಳಕೆಗೆ ಸುಲಭವಾಗಿರುವದಿಲ್ಲದ್ದನ್ನು ನೋಡಿದ್ದೇನೆ. ಅಲ್ಲಿ ಮೆಮೋರಿ ಎಷ್ಟು ಖಾಲಿ ಇದೆ ಎಂದು ನೋಡಬೇಕಾದರೆ ಸ್ವಲ್ಪಮಟ್ಟಿಗೆ ಪ್ರಯಾಸ ಪಡಬೇಕು.ಫೈಲ್ ಮೆನೆಜರ್ ಎಂಬ ಆ್ಯಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಂಡರೆ ಒಂದೇ ಸ್ಕ್ರೀನಿನಲ್ಲಿ ಸ್ಟೋರೆಜ್ ,ಆಡಿಯೋ,ವೀಡಿಯೋ, ಡಾಕ್ಯುಮೆಂಟ್ ಇನ್ನಿತರ ಪೈಲ್ ಗಳನ್ನು ಯಾವುದೇ ಗೊಂದಲಗಳಿಲ್ಲದೇ ನೋಡಬಹುದು.ಅಲ್ಲದೇ ಇದು ಇಂಟರ್ನಲ್ ಮೆಮೋರಿ ಎಸ್ ಡಿ ಕಾರ್ಡ ನಲ್ಲಿ ಲಭ್ಯವಿರುವ ಸ್ಥಳಾವಕಾಶವನ್ನು ಗ್ರಾಪ್ ಮೂಲಕ ತೋರಿಸುತ್ತದೆ.

ಪೋನಿನ ಕಾರ್ಯದಕ್ಷತೆ ಚನ್ನಾಗಿಯೇ ಇರಬೇಕಾದರೆ ಲೈವ್ ವಾಲ್ ಪೇಪರ್ ಬಳಸಬೇಡಿ. ಇಲ್ಲಿ ದೃಶ್ಯಗಳು ಚಲಿಸುವುದರಿಂದ ಬ್ಯಾಟರಿಯ ಶಕ್ತಿ ಯ ತುಸು ಭಾಗ  ವಾಲ್ ಪೇಪರ್ ಬಳಸಿಕೊಳ್ಳುತ್ತದೆ
ಪೋನಿಗೆ ಹೊಸ ಬಗೆಯ ಐಕಾನ್ ಗಳು ಬರುವಂತೆ ಮಾಡಲು ಸಾಕಷ್ಟು ಲಾಂಚರ್ (ಥೀಮ್) ಪ್ಲೇಸ್ಟೊರ್ ನಲ್ಲಿ ಸಿಗುತ್ತದೆ. ಇವನ್ನು ಉಪಯೋಗಿಸಿದರೆ ಕೆಲ ಪೋನ್ ನಿಧಾನ ವಾಗಿ ಕೆಲಸ ಮಾಡುತ್ತದೆ.
ಇಂತವುಗಳನ್ನು ಬಳಕೆಮಾಡದಿರುವದು ಉತ್ತಮ.
Attachments area

Monday, December 4, 2017

ಆನ್ಲೈನ್ ಮೂಲಕ ಬಿಲ್ ಪಾವತಿಸಿಲು ಸ್ಮಾರ್ಟ್ ವಿಧಾನ:





ಹಳ್ಳಿಯ ಬಹುತೇಕ  ಜನರಿಗೆ ತಿಂಗಳ ಕೊನೆ ಬಂತೆಂದರೆ ಸಾಕು ಕರೆಂಟ್ ಬಿಲ್ ,ಪೋನ್ ಬಿಲ್ ತುಂಬುವ ಸಲುವಾಗಿ ಕೇಂದ್ರ ಸ್ಥಾನಕ್ಕೆ ಹೋಗುವ ಅನಿವಾರ್ಯತೆ ಇದೆ. ಸೇವೆ  ನಮಗೆ ಬೇಕಾದಲ್ಲಿ ಹಣ ತುಂಬಲೇ ಬೇಕು.   ಈ ಲೇಖನ ಓದಿದ ಮೇಲೆ ನೀವು ಬಿಲ್ ಪಾವತಿಸಲು ಬಹಳ ದೂರ ಹೋಗ ಬೇಕಿಲ್ಲ ಸರಿಯಾದ ಮೊಬೈಲ್‌ ಕವರೇಜ್ , ಇಂಟರ್ನೆಟ್ ಸಿಗ್ನಲ್ ಇರುವಲ್ಲಿತನಕ ಹೋದರೆ ಸಾಕು.!

ಕೇಂದ್ರ ಸರಕಾರದ ಇತ್ತೀಚಿಗೆ ಹಣಕಾಸು ವಹಿವಾಟು ನೆಡೆಸಲು ಕೆಲ ಮಹತ್ತರ ಬದಲಾವಣೆ ತಂದಿದೆ. ನಗದು ರಹಿತ ಆನ್ಲೈನ್ ವ್ಯವಹಾರಕ್ಕೆ ಹೆಚ್ಚು ಪ್ರಾಮುಖ್ಯತೆ ಯನ್ನು ನೀಡಿ ಸರಕಾರದಿಂದಲೇ ಹಣಪಾವತಿಸುವ ಅಪ್ಲಿಕೇಷನ್ ಕೂಡಾ ಬಿಡುಗಡೆ ಮಾಡಿದೆ. ಈ ಹೊತ್ತಿಗೆ ಬಹು ಹಿಂದಿನಿಂದ ಇದ್ದ ಖಾಸಗೀ  ಕಂಪನಿಗಳ ಆನ್ಲೈನ್ ಮೂಲಕ ಹಣ ಪಾವತಿಸುವ ಅಪ್ಲಿಕೇಶನ್ ಗಳು ವ್ಯಾಪಕವಾಗಿ ಚಾಲ್ತಿಯಲ್ಲಿಬಂತು. 

ಸುಲಭ, ತ್ವರಿತ ಹಾಗೂ ಕಾಗದ ರಹಿತ ವಾಗಿ ಬಿಲ್ ಪಾವತಿಸುವದು, ಹಣದ ವರ್ಗಾವಣೆಯನ್ನು ಅಪ್ಲಿಕೇಶನ್ ಮೂಲಕ ಸುಲಭವಾಗಿ ಮಾಡಬಹುದು.

ನಾನು ಬಹಳ ಹಿಂದಿನಿಂದ ಪ್ರೀಚಾರ್ಜ ಎಂಬ ಅಪ್ಲಿಕೇಶನ್ ಮೂಲಕ ಪೋನ್ ಬಿಲ್.ಮೊಬೈಲ್ ಕರೆನ್ಸಿ ಟಾಪ್ ಅಪ್,ಟೀವಿ ರಿಸೀವರ್ ರೀಚಾರ್ಜ್ ಗಳನ್ನು ಮನೆಯಲ್ಲೇ ಕುಳಿತು ಮಾಡುತ್ತ ಬಂದಿದ್ದೇನೆ. ಈ ಅಪ್ಲಿಕೇಶನ್ ನಿಜಕ್ಕೂ ಸ್ಮಾರ್ಟ್ ಆಗಿದೆ.  ಉದಾಹರಣೆಗೆ ಬಿಎಸ್ಎನ್ ಎಲ್ ನ ಲ್ಯಾಂಡ್‌ ಲೈನ್ ನ ಮಾಸಿಕ ಬಿಲ್ ನ  ಮೊತ್ತದ ಮೆಸೇಜ್ ನಿಮ್ಮ ಪೋನಿಗೆ ಬಂದಿದ್ದನ್ನು 







ಸ್ವಯಂಚಾಲಿತವಾಗಿ  ಓದಿಕೊಂಡು ಹಣಪಾವತಿಸಲು ನಮಗೆ ವಿನಂತಿಸುತ್ತದೆ.ಕೆಲವೇ ಕ್ಷಣದಲ್ಲಿ ನಮ್ಮ ಎಟಿಎಂ ಕಾರ್ಡಿನ cvv ನಂಬರ್ ನಮೂದಿಸುವದು ಹಾಗೂ ನಂತರ ನಮಗೆ ಬರುವ ಒಟಿಪಿ ಮೆಸೆಜನ್ನು ಧೃಡಿಕರಣ ಮಾಡಿದರೆ ಬಿಲ್ ಪಾವತಿಯ ಪ್ರಕ್ರಿಯೆ ಮುಗಿಯುತ್ತದೆ.
ಇದು ವರೆಗೂ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಅಪ್ಲಿಕೇಶನ್ ತಯಾರಿಸುವ ಕಂಪನಿಯು ನಾವು ನಮೂದಿಸುವ ವಿಷಯಗಳನ್ನು ಗೋಪ್ಯವಾಗಿ ಹಾಗೂ ದಾಳಿಕೋರರ (ಹ್ಯಾಕರ್) ,ವಿರುದ್ಧ ಸಾಕಷ್ಟು ಭದ್ರತಾ ಮುನ್ನೆಚ್ಚರಿಕೆ ಹೊಂದಿರುತ್ತದೆ. ಹಾಗಾಗಿ ಆರಾಮವಾಗಿ ಬಿಲ್ ಪಾವತಿಸಬಹುದು.

ಇಲ್ಲಿಯ ತನಕ ಕರೆಂಟ್ ಬಿಲ್ ಅನ್ನು ಹೊರಗಡೆ ತುಂಬಬೇಕಾಗಿತ್ತು.ಇತ್ತೀಚೆಗೆ ಹೆಸ್ಕಾಂ (ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ) ಯವರು
 ಪೇಟಿಎಂ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿ ಕೊಂಡು ವಿದ್ಯುತ್ ಬಿಲ್ ಕೂಡಾ ಮೊಬೈಲ್ ಮೂಲಕ ಪಾವತಿಸಲು ಅನುಕೂಲ ಮಾಡಿಕೊಟ್ಟಿದೆ.


ಬಿಲ್ ಪಾವತಿಸುವ ಮುನ್ನ:

ನಿಮ್ಮ ಸ್ಮಾರ್ಟ್ ಪೋನಿನಲ್ಲಿ ಗೂಗಲ್ ಪ್ಲೇ ಸ್ಟೂರ್ ಓಪನ್ ಮಾಡಿ. ನೀವು   ಆಯ್ಕೆ ಮಾಡಿದ ಅಪ್ಲಿಕೇಶನ್ ಡೌನ್ಲೋಡ್ ಮಾಡಿ. 
ಅಲ್ಲಿ ಸೂಚಿಸಿದಂತೆ ನಿಮ್ಮ ಚಾಲ್ತಿಯಲ್ಲಿರುವ ಎಟಿಮ್ ಕಾರ್ಡ ನಂಬರ್ ನಮೂದಿಸಿ. ಈಮೇಲ್ ವಿವರದ ಜೊತೆಗೆ ಇನ್ನಿತರ ಮಾಹಿತಿಯನ್ನು ತುಂಬಬೇಕು.ಇದಕ್ಕೆ ಮೂರು ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. ಒಮ್ಮೆ ನಮೂದಿಸಿದ  ಎಟಿಎಂ ಕಾರ್ಡ ವಿವರವನ್ನು ಮತ್ತೆ ಬಿಲ್ ಪಾವತಿಸುವಾಗ ತುಂಬಬೇಕಿಲ್ಲ.
ನಿಮ್ಮ ಅಪ್ಲಿಕೇಶನ್ ನಲ್ಲಿ ಭದ್ರವಾಗಿ ಸೇವ್ ಆಗಿರುತ್ತದೆ.



ಆನ್ಲೈನ್ ಬಿಲ್ ಪಾವತಿಯಲ್ಲಿ ಹಲವಾರು ಬಗೆಯ ರಿಯಾತಿಗಳು ದೊರೆಯುವ ಅವಕಾಶವೂ ಇದೆ. ಈ ಆ್ಯಪ್ ನಿಂದ ಪಟ್ಟಣದವರು  ಜಲಮಂಡಲಿಯ ಸಹಭಾಗಿತ್ವ ಇದ್ದರೆ ನೀರಿನ ಬಿಲ್ ಕೂಡಾ ತುಂಬಬಹುದು. ಮೆಟ್ರೋ ರೈಲ್ ಟಿಕೇಟ್, ಟೋಲ್ ಸುಂಕ ಪಾವತಿ .ರೈಲ್ವೇ ಟಿಕೇಟ್ ಬುಕಿಂಗ್ ಸಿನಿಮಾ ಟಿಕೇಟ್ ಹಾಗೂ ಹೋಟೆಲಿನ ಬಿಲ್ ಪಾವತಿಸಲು ನೆರವಾಗುತ್ತದೆ.



cvv: ಕಾರ್ಡ ವೆರಿಪಿಕೇಷನ ವ್ಯಾಲ್ಯೂ ಎಂಬುದರ ಸಂಕ್ಷಿಪ್ತ ರೂಪ cvv.ನಿಮ್ಮ ಎಟಿಎಂ  ಕಾರ್ಡ
 ನ ಹಿಂಭಾಗದಲ್ಲಿ ಮೂರು ಅಂಕಿಗಳನ್ನು ಹೊಂದಿರುತ್ತದೆ.ಇದನ್ನೇ ಸಿವಿವಿ ನಂಬರ್ ಎನ್ನುವರು. ಪ್ರತಿಬಾರಿ ಅಪ್ಲಿಕೇಶನ್ ಮೂಲಕ ಹಣಪಾವತಿಸುವ ಸಮಯದಲ್ಲಿ ಇದನ್ನು ನಮೂದಿಸಬೇಕು.


Sunday, November 19, 2017

ಆನ್ಲೈನ್ ಅಂಗಡಿಗಳು!

ಸ್ಮಾರ್ಟ್ ಫೋನ್ ಬಂದನಂತರ ವಾಣಿಜ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಂತರ್ಜಾಲವನ್ನು ಬಳಸಿಕೊಂಡು ಮಾರಾಟಗಾರರು ನೇರವಾಗಿ ಗ್ರಾಹಕರ ವಿಳಾಸಕ್ಕೆ ವಸ್ತುವನ್ನು ಕೋರಿಯರ್  ಮಾಡುವುದರ ಮೂಲಕ ಈ ಕಾಮರ್ಸ ನಲ್ಲಿ ಮಹತ್ತರ ಬದಲಾವಣೆ ಆಗಿದ್ದಂತೂ ಸತ್ಯ.ನಮ್ಮ ತಾಲೂಕಿನಲ್ಲಿ ಸಿಗದ ವಸ್ತುಗಳನ್ನು ನಮ್ಮ ಪೋನ್ ಮೂಲಕವೇ ಆರ್ಡರ್ ಮಾಡಿ ಸುಲಭವಾಗಿ  ತರಿಕೊಳ್ಳಬಹುದು .ಭಾರತಾದ್ಯಂತ ಸಿಗುವ ವೈವಿಧ್ಯಮಯ ಸರಕುಗಳು ಇತ್ತೀಚಿಗೆ ಆನ್ಲೈನಲ್ಲಿ ಮಾರಾಟಕ್ಕಿದೆ. ನೀವು ನಿಮ್ಮ ಆಯ್ಕೆಯ ವಸ್ತುಗಳನ್ನು ತರಿಸಿಕೊಳ್ಳಬಹುದು .
ಸುಲಭ ತ್ವರಿತ ಖರೀದಿಗೆ  ನಿಮ್ಮ ಬಳಿ ಒಂದು ಡೆಬಿಟ್ ಕಾರ್ಡ್(ಎಟಿಎಮ್ )ಇದ್ದರೆ ಒಳ್ಳೆಯದು.

ಖರೀದಿಸುವವ ಮೊದಲು:

ನಿಮ್ಮ ಫೋನ್ ನಲ್ಲಿರುವ ಗೂಗಲ್ ಸರ್ಚ್ ನಿಂದ ನೀವು ಖರೀದಿಸಲು ಇಚ್ಛಿಸಿರುವ  ಸಾಮಗ್ರಿಯನ್ನು ಟೈಪ್ ಮಾಡಿ.
ನೀವು ಸರ್ಚ್ ಮಾಡಿದ ನಂತರ ಅಲ್ಲಿ ಆನ್ ಲೈನ್ ಮಾರಾಟಗಾರರ  ಪಟ್ಟಿಯ ನಿಮ್ಮ ಮುಂದೆ ಬರುತ್ತದೆ ಅಲ್ಲಿ ನಿಮ್ಮ ಆಯ್ಕೆಯ ವಸ್ತು ಯಾವ ಆನ್ ಲೈನ್ ಮಾರಾಟಗಾರ ಜಾಲತಾಣದಲ್ಲಿ ಕಡಿಮೆ ದಲ್ಲಿ ದೊರಕುತ್ತದೆಯೋ ಆ ಕಂಪನಿಯ ಅಪ್ಲಿಕೇಶನ್ ಅನ್ನು  ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.
ಅಪ್ಲಿಕೇಷನ್ ಇನ್ಸ್ಟಾಲ್ ಆದ ಕೂಡಲೇ ನಿಮ್ಮ ಜಿಮೇಲ್ ಅಥವಾ ಪೇಸ್ಬುಕ್ ಖಾತೆಯಿಂದ (login )ಪ್ರವೇಶ ಮಾಡಿ.
ಪುನಃ ನಿಮ್ಮ ಆಯ್ಕೆಯ ವಸ್ತು ವನ್ನು ಸರ್ಚ ಮಾಡಿ‌. ನಿಮಗೆ ವಿವರ ಸಿಗುತ್ತದೆ.
ಉದಾಹರಣೆಗೆ ನೀವು ಒಂದು ವಾಚ್ ಕೊಳ್ಳುವ ಇಚ್ಛೆ ಇದ್ದಲ್ಲಿ ಮೊದಲೇ ಕೊಂಡಂತಹ ಗ್ರಾಹಕರು ತಾವು ಬಳಸಿದ ವಾಚ್ ಬಗೆಗೆ ರೇಟಿಂಗ್ ಕೊಟ್ಟಿರುತ್ತಾರೆ. ಅವರ ಅಭಿಪ್ರಾಯಗಳನ್ನು ಆಧರಿಸಿ ನೀವು ಖರೀದಿಯ ಅಂತಿಮ ನಿರ್ಧಾರ ಮಾಡಬಹುದು.
ಇನ್ನು ಮುಂದಿನ ಹಂತಗಳು ಸುಲಭವಾಗಿದ್ದು ಅಪ್ಲಿಕೇಶನ್ ನಿಮಗೆ ಕ್ರಮವಾಗಿ ವಿಳಾಸ ಇನ್ನಿತರ ವಿವರಗಳನ್ನು ತೋರಿಸುತ್ತದೆ.


ಹಣ ಪಾವತಿಯಲ್ಲಿ ಗಮನಿಸಬೇಕಾದ  ವಿಷಯಗಳು.
ವಸ್ತು ಕೈಗೆ ಬಂದನಂತರ ಹಣಪಾವತಿಸುವದು ಕ್ಯಾಷ ಆನ್ ಡಿಲೆವರಿ ಅಥವಾ ಪೇ ಆನ್ ಡಿಲೆವರಿ ಎನ್ನುತ್ತಾರೆ. ಈ ಆಯ್ಕೆ ನಿಮಗೆ ಲಭ್ಯವಿದ್ದರೆ ಖರೀದಿ ಸುಲಭವಾಗಿ ಆಗುತ್ತದೆ.
  ಹಣವನ್ನು ಮೊದಲೇ ಪಾವತಿಸಿ ಕೊಳ್ಳುವ ದಾದರೆ ಅದಕ್ಕೂ ಅವಕಾಶವಿರುತ್ತದೆ.
ಈ ಹಂತದಲ್ಲಿ ನಿಮ್ಮ ಡೆಬಿಟ್ ಕಾರ್ಡ್ ಬಳಸಬೇಕು. ಅಪ್ಲಿಕೇಶನ್ ಗಳಲ್ಲಿ ಯಾವುದೇ ಗೊಂದಲ ಗಳಿಲ್ಲದೇ ನೀವು ಕಾರ್ಡ್ ಮೂಲಕ ಹಣ ಪಾವತಿಸಿ ಖರೀದಿಸಬಹುದು.
ನಿಮ್ಮ ವಸ್ತು ಎಲ್ಲಿ ಪ್ಯಾಕ್ ಆಗವ ವಿವರ,ನಿಮ್ಮ ಕೈ ಗೆ ಬರುವ ದಿನಾಂಕದ ಮಾಹಿತಿಯು ಸ್ವಯಂ ಚಾಲಿತವಾಗಿ ನಿಮಗೆ ದೊರಕುತ್ತದೆ.
ಎಚ್ಚರಿಕೆ ವಹಿಸಬೇಕಾದ ವಿಚಾರಗಳು.

ಇತ್ತಿಚಗೆ ಕೆಲವು ಕಂಪನಿಯ ಆನ್ಲೈನ್ ವ್ಯಾಪಾರ ದಲ್ಲಿ ಕೆಲ ವಸ್ತು ಗಳು  ಅದಲು ಬದಲು ಆಗಿದೆ. ಇದಕ್ಕೆ ಕಂಪನಿಯವರು ಸ್ಪಂದಿಸುತ್ತಾರೆ.ಇದಕ್ಕೆ ಸಮಯಾವಕಾಶ ಬೇಕು.
ಸಮರ್ಪಕ ವಿಳಾಸ ಕೊಡದಿದ್ದಲ್ಲಿ ನಿಮ್ಮ ವಸ್ತು ಕಂಪನಿಗೆ ವಾಪಸಾಗುತ್ತದೆ.ವಿಳಾಸ ಸ್ಪಷ್ಟ ವಾಗಿರಲಿ
ಕೇವಲ ಬ್ರಾಡ್ಬ್ಯಾಂಡ್ ಸಂಪರ್ಕದಿಂದ ಆನ್ ಲೈನ್ ಖರೀದಿ ಪ್ರಕ್ರಿಯೆಯ ಸಂಪೂರ್ಣ ವಾಗುವದಿಲ್ಲ. ಹಣ ಪಾವತಿಸಲು ಮೊಬೈಲ್‌ ನೆಟ್ವರ್ಕ್ ಕವರೇಜ್ ಅವಶ್ಯಕ.
(ಇಂದಿನ ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)

Sunday, November 12, 2017

ಸ್ಮಾರ್ಟ್ ಫೋನ್ ಬಳಕೆಗೆ ಒಂದಷ್ಟು ಸಲಹೆ

ಕಳೆದ ಎರಡು ಲೇಖನಗಳಿಂದ ನೀವು ಮೊಬೈಲ್‌ಗೆ ಇಂಟರನೆಟ್ ಸಂಪರ್ಕವನ್ನು ಹೊಂದುವ ಬಗೆಯನ್ನು ತಿಳಿದುಕೊಂಡಿದ್ದೀರಿ. ಈಗ ಇಂಟರ್‌ನೆಟ್‌ನ ಸಂಪರ್ಕದಿಂದ ನಿಮ್ಮ ಫೋನ್ ಅನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳುವುದನ್ನು ತಿಳಿಯೋಣ.
ಸ್ಮಾರ್ಟ್ ಫೋನ್ ಅನ್ನು ಸುಮಾರು ನೂರಕ್ಕೆ ಎಪ್ಪತೈದು ಮಂದಿ ಜೀಮೇಲ್ ಖಾತೆ ಬಳಸಿ ಇನ್ನು ಇಪ್ಪತೈದು ಮಂದಿ ಯಾವುದೇ ಖಾತೆ ಇಲ್ಲದೇ ಒಂದು ಸಾಮಾನ್ಯ ಫೋನ್‌ನಂತೆ ಬಳಸುತ್ತಿದ್ದಾರೆ. ಡಿಜಿಟಲ್ ಯುಗದಲ್ಲಿ ಕೆಲಸಗಳು ಸುಲಲಿತವಾಗಿ ಆಗಬೇಕೆಂದರೆ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಲೇಬೇಕು, ಇದು ಅನಿವಾರ್ಯ ಕೂಡಾ.
ಅಂಡ್ರಾಯ್ಡ ಫೋನ್ ಕಾರ್ಯನಿರ್ವಹಿಸುವ ವಿಧಾನ.
ಟಚ್‌ಸ್ಕ್ರೀನ್ ಫೋನ್ ಗಾಜಿನಿಂದ ಮಾಡಲ್ಪಟ್ಟ ಪರದೆ ಆಗಿದ್ದು ಇಲ್ಲಿ ನಿರಂತರ ವಿದ್ಯುತ್ ವಾಹಕಗಳು ಸಂಚರಿಸುತ್ತವೆ. ನಿಮ್ಮ ಬೆರಳು ಫೋನ್ ಪರದೆಯನ್ನು ಸ್ಪರ್ಶಿಸಿದ ತಕ್ಷಣ ಎರಡು ವಿದ್ಯುತ್ ವಾಹಕಗಳು ಪರಸ್ಪರ ಸೇರಿ ಕಾರ್ಯ ಮಾಡುತ್ತದೆ. ಕೇವಲ ಸ್ಪರ್ಷಿಸಿದರೆ ಸಾಕು, ಸ್ಕ್ರೀನ್ ಅನ್ನು ಗಟ್ಟಿಯಾಗಿ ಒತ್ತುವ ಅವಶ್ಯಕತೆಯೇ ಇರುವುದಿಲ್ಲ.
ಗೂಗಲ್‌ನವರು ಸಿದ್ಧಪಡಿಸಿದ ಅಂಡ್ರಾಯ್ಡ್ ತಂತ್ರಾಂಶದ ಮೂಲಕ ಕೆಲಸ ಮಾಡುವ ಫೋನ್ ಅಂಡ್ರಾಯ್ಡ್ ಫೋನ್ ಆಗಿದೆ. ಆಪಲ್ ಕಂಪನಿಯ ಐಫೋನ್ ಹಾಗೂ ಇತರ ಗ್ಯಾಜೆಟ್ ಗಳು ಐಓಎಸ್ ತಂತ್ರಾಂಶದ ಆಧಾರದ ಮೆಲೆ ಕೆಲಸ ಮಾಡುತ್ತದೆ. ಇದನ್ನು ನೀವು ಐಫೋನ್, ಐಪ್ಯಾಡ್‌ಗಳಲ್ಲಿ ನೋಡಬಹುದು.
ಪ್ಲೇ ಸ್ಟೋರ್ ಸಂಪರ್ಕಿಸುವ ವಿಧಾನ:
ಈ ಲೇಖನದ ಮೊದಲೇ ತಿಳಿಸಿದಂತೆ ಬಹಳಷ್ಟು ಜನರು ಜೀಮೇಲ್ ಖಾತೆ ಇಲ್ಲದೇ ಅಂಡ್ರಾಯ್ಡ್ ಫೋನ್ ಅನ್ನು ಬಳಸುತ್ತಿದ್ದಾರೆ. ಹೀಗೆ ಬಳಸುವುದರಿಂದ ಪ್ಲೇಸ್ಟೋರ್‌ನ ಸರಿಯಾದ ಬಳಕೆ ಆಗುವುದೇ ಇಲ್ಲಾ. ಒಂದು ಸಮೀಕ್ಷೆಯ ಪ್ರಕಾರ ಸಪ್ಟೆಂಬರ್ 2017ರ ತನಕ ಪ್ಲೇಸ್ಟೋರ್‌ನಲ್ಲಿ 33ಲಕ್ಷ ಅಪ್ಲಿಕೇಶನ್ (ತಂತ್ರಾಂಶ) ಲಭ್ಯವಿದೆ!. ಇವುಗಳಲ್ಲಿ ನಮಗೆ ಉಪಯುಕ್ತವಾದ ಅಪ್ಲಿಕೇಶನ್ ಪಡೆಯಲು ಜೀಮೇಲ್ ಅಕೌಂಟ್ ಹೊಂದಿರಬೇಕು. ನಿಮ್ಮ ಫೋನಿನಲ್ಲಿ ಪ್ಲೇಸ್ಟೋರ್ ಐಕಾನನ್ನು ತೆರೆದು ಅಲ್ಲಿ ಜೀಮೇಲ್ ಖಾತೆಯ ಹೆಸರು ಪಾಸ್‌ವರ್ಡ್ ನೋಂದಾಯಿಸಿದರೆ ಅಧಿಕೃತವಾಗಿ ನೀವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಜೀಮೇಲ್ ಖಾತೆಯನ್ನು ಹೊಂದಿದ್ದರೆ ನಿಮ್ಮ ಫೋನ್ ಕಾಂಟ್ಯಾಕ್ಟ್‌ಅನ್ನು ಅಂತರ್ಜಾಲಕ್ಕೆ ನಿಮ್ಮ ಭದ್ರತೆಯಲ್ಲಿ ಸೇರಿಸಿಡಬಹುದು. ಫೋನ್ ಕಳೆದಾಗ, ಹೊಸ ಫೋನ್ ಖರೀದಿಸಿದಾಗ ಮತ್ತೆ ನೀವು ಜೀಮೇಲ್ ಖಾತೆ ನಮೂದಿಸಿದರೆ ನಿಮ್ಮ ಹಿಂದಿನ ಫೋನ್‌ನಲ್ಲಿನ ಎಲ್ಲಾ ದಾಖಲೆಗಳೂ ಪುನಃ ಸ್ಥಾಪಿಸಲ್ಪಡುತ್ತವೆ. ನೀವು ತೆಗೆದ ಫೋಟೊಗಳನ್ನೂ ಕೂಡ ಜೀಮೇಲ್‌ನಲ್ಲಿ ಶೇಖರಿಸಿಡಬಹುದು. ಗೂಗಲ್ ಪ್ರತಿ ಖಾತೆದಾರನಿಗೆ 15ಜಿಬಿ ಸ್ಥಳಾವಕಾಶ ಕೊಡುತ್ತಿದೆ. ಇಲ್ಲಿ ನಿಮ್ಮ ಡಾಟಾಗಳನ್ನು ಇಟ್ಟುಕೊಳ್ಳಬಹುದು.
ಡೌನ್‌ಲೋಡ್ ಮಾಡಿ: ಪ್ಲೇಸ್ಟೋರ್‌ನಲ್ಲಿ ನಿಮ್ಮ ಜೀಮೇಲ್ ಖಾತೆಯನ್ನು ನಮೂದಿಸಿ ನಿಮಗೆ ಅನುಕೂಲವಾಗುವಂತಹ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ಲೇಸ್ಟೋರ್‌ನಲ್ಲಿ ಎಲ್ಲ ವಯೋಮಾನದವರಿಗೂ ಅವರವರದೇ ಅಭಿರುಚಿಗೆ ತಕ್ಕಂತಹ ಆಪ್‌ಗಳಿವೆ. ಕೆಲವು ಉಚಿಯವಾಗಿ ಸಿಗುತ್ತವೆ. ಹೆಚ್ಚಿನ ಗುಣಮಟ್ಟದ ಆಪ್ ಬೇಕಾದಲ್ಲಿ ಹಣಕೊಟ್ಟು ಕೊಳ್ಳಬಹುದು. ಈಗ ಉಚಿತವಾಗಿ ಸಿಗುವ ಅಪ್ಲಿಕೇಶನ್ ಪ್ರಮಾಣ ಹೆಚ್ಚಿದೆ. ಜನರಿಗೆ ಹೆಚ್ಚು ಪ್ರಯೋಜನವಾಗಲೆಂದು ಬಹುತೇಕ ಸಂಸ್ಥೆಗಳು ಉಚಿತವಾಗಿ ಆಪ್ ಬಿಡುಗಡೆ ಮಾಡಿ ಸಮಾಜಕ್ಕೆ ಸೇವೆ ಮಾಡುತ್ತಿದ್ದಾರೆ.
Last calls :- ಫೋನ್‌ನಲ್ಲಿ ಸುಲಭವಾಗಿ ರೀಡೈಲ್ ಮಾಡಲು ಈ ಆಪ್ ತುಂಬಾ ಸಹಾಯಮಾಡುತ್ತದೆ. ಹೊಸದಾಗಿ ಫೋನ್ ಬಳಸುವವರಿಗೂ ಇದನ್ನು ಡೌನ್‌ಲೋಡ್ ಮಾಡಿಕೊಂಡಲ್ಲಿ ಆರಾಮವಾಗಿ ಕೇವಲ ಒಂದು ಟಚ್ನಲ್ಲಿ ಲಾಸ್ಟ್ ಕಾಲ್ಸ್ ಪಟ್ಟಿ ತೆಗೆದು ನೋಡಬಹುದು. ಈ ಆಪ್‌ನ ಲಿಂಕ್ goo.gl/8urRzH ನೀವು ಪ್ಲೇಸ್ಟೋರ್‌ನಲ್ಲಿ Last calls ಎಂದು ಸರ್ಚ್ ಮಾಡಿದರೂ ಈ ಆಪ್ ನಿಮಗೆ ದೊರಕುತ್ತದೆ.

Saturday, November 4, 2017

ಬಹು ಉಪಯೋಗಿ ಜಿಯೋ ಫೈ


ಬಹು ಉಪಯೋಗಿ ಜಿಯೋ ಫೈ



ಜಿಯೋ  4ಜಿ ನೆಟ್ವರ್ಕ್ ನಮ್ಮಲ್ಲಿ ಶುರುವಾದ ಕೂಡಲೇ ಇಂಟರ್ನೆಟ್  ಅನ್ನು ಮೊಬೈಲ್ ಮೂಲಕ ಬಳಸುವವರು ಹಾಗೂ ಬಳಸುವ ಸಮಯವೂ ಅಧಿಕವಾಯಿತು!.ಜಿಯೋ  ಕಂಪನಿಯ  ದರ ಸಮರದ ಪರಿಣಾಮವಾಗಿ ಇತರ ಕಂಪನಿಯವರ ನೆಟ್ ಪ್ಯಾಕ್ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು ಸತ್ಯ.

 ಬಹುಉಪಯೋಗಿ ಜಿಯೋ ಫೈ.
ರೂ 1999 ದರ ಹೊಂದಿದ್ದ ಜಿಯೋ ಫೈ ಪೆಸ್ಟಿವ್ ಆಫರ್ ನಿಂದ ಇತ್ತೀಚಿಗೆ ರೂ 999 ಕ್ಕೆ ದೊರಕುತ್ತಿದೆ. ಇದು ನಿಜಕ್ಕೂ ಒಳ್ಳೆಯ ಕೊಡುಗೆಯಾಗಿದ್ದು ಬಳಸಲೂ  ಸುಲಭವಾಗಿದೆ. ಪುಟ್ಟದಾದ ಜಿಯೋ ಫೈ  ಪೋರ್ಟೆಬಲ್ ವೈಫೈ ರೂಟರ್ ಆಗಿ ಚನ್ನಾಗಿ ಕಾರ್ಯ ನಿರ್ವಹಿಸುತ್ತದೆ.
 ಅತ್ಯಂತ ಕಡಿಮೆ ಜಿಯೂ ನೆಟ್ವರ್ಕ ಇರುವ ಸ್ಥಳ ದಲ್ಲಿ  ನಿಮ್ಮ ಮೊಬೈಲ್ ಸೆಟ್ ನಲ್ಲಿ ಸರಿಯಾಗಿ ನೆಟ್ ಸಂಪರ್ಕ ಬರದಿದ್ದರೂ ಜಿಯೋ ಫೈ ಅತ್ಯಂತ ತ್ವರಿತ ವೇಗದಲ್ಲಿ ಇಂಟರ್ನೆಟ್ ದತ್ತಾಂಶ ಒದಗಿಸುತ್ತದೆ. ಜಿಯೋ ಫೈ  ಶಕ್ತಿಶಾಲಿಯಾಗಿದ್ದು ಇದರಿಂದ ಏಕಕಾಲಕ್ಕೆ ಮೂವತ್ತೊಂದು ಜನರು ತಮ್ಮ ಡಿವೈಸ್ ಗಳಲ್ಲಿ ಇಂಟರ್ನೆಟ್ ಸೇವೆಯನ್ನು ಬಳಸಬಹುದು.
ಈಗಾಗಲೇ ನಿಮ್ಮ ಬಳಿ ಜಿಯೋ ಸಿಮ್ ಇದ್ದರೆ ನೀವು ಜಿಯೋ ಫೈ ಖರೀದಿಸಿ ಈಗ ಬಳಸುತ್ತಿರುವ  ಸಿಮ್ ಅನ್ನು ಜಿಯೋ ಫೈ ಗೆ ಅಳವಡಿಸಿ ಕೊಂಡು ಬಳಸಬಹುದು.ಈ ವೈ ಫೈ ರೂಟರ್ ನಿಂದ ನಿಮ್ಮ ಪೋನ್ ಕನೆಕ್ಟಮಾಡಿ ನಿಮ್ಮ ಪೋನ್ ನಲ್ಲಿ ಯಾವುದೇ ಸಿಮ್ ಇಲ್ಲದೇ ಎಲ್ಲ ಕಡೆ ಪೋನ್ ಕರೆ ಮಾಡಬಹುದು.
 ನಮ್ಮ ವಾಸಸ್ಥಳದಲ್ಲಿ ಯಾವ ಯಾವ  ಕಂಪನಿಯ ಸಿಗ್ನಲ್ ಬರಬಹುದು ಎಂಬ ಕುತೂಹಲ ಈಗ ನಿಮಗೆ ಬಂದಿದ್ದರೆ ನೀವು ಮೊಬೈಲ್ ಸಿಗ್ನಲ್ ಸರ್ಚಮಾಡಬೇಕು.ಈ ಕೆಳಗಿನ ವಿಧಾನದಿಂದ ನೀವೇ ಲಭ್ಯವಿರುವ ಸಿಗ್ನಲ್ ಗಳನ್ನು ಪರೀಕ್ಷಿಸಿ ಕೊಳ್ಳಬಹುದು.

ವಿಧಾನ:
ನಿಮ್ಮ ಪೋನ್ ಸೆಟ್ಟಿಂಗ್ಸ ತೆರೆಯಿರಿ>ನೆಟ್ ವರ್ಕ ಸೆಟ್ಟಿಂಗ್>ನೆಟ್ವರ್ಕ್ ಆಪರೇಟರ್ ಆಯ್ಕೆಮಾಡಿ ಅಲ್ಲಿ ನೆಟ್ವರ್ಕ್ ಸರ್ಚ ಮಾಡಿ 
ನಿಮ್ಮ ಪೋನ್ 

ಲಭ್ಯವಿರುವ ಕಂಪನಿಯ ಸಿಗ್ನಲ್ ತೋರಿಸುತ್ತದೆ. ನಂತರ  ನಿಮ್ಮ ಆಯ್ಕೆಯ ಸಿಮ್ ಖರೀದಿಸಿ ನೆಟ್ ಲೋಕದಲ್ಲಿ ಜಾಲಾಡಿ!.


ಏನಿದು  4ಜಿ?
ಟೆಲಿಕಾಂ ಕ್ಷೇತ್ರದಲ್ಲಿ ಜಿ ಎಂದರೆ ಜನರೇಷನ್ (ತಲೆಮಾರು) ಎಂದು ಅರ್ಥೈಸುತ್ತಾರೆ.ಈಗ 3ಜಿ ಸೇವೆಯ ಯಶಸ್ವೀ ಸೇವೆಯ ನಂತಮೂಲಕ 4ಜಿ ಲಭ್ಯವಿದೆ. ಮತ್ತೂ ಮುಂದುವರಿದು 5ಜಿ ಪ್ರಯೋಗವೂ ನೆಡೆಯಿತ್ತಿದೆ.

4ಜಿ ಸೇವೆಯು 3ಜಿ ಸೇವೆಗಿಂತ ಮೂವತ್ತು ಪಟ್ಟು ಅಧಿಕವೇಗದಲ್ಲಿ ಇಂಟರ್ನೆಟ್ ಸೇವೆ ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಓಎಲ್ಟಿಇ ಎಂಬ ಸೇವೆ ಇದೆ. ಇದರ ಮೂಲಕ ನೆಟ್ ಪ್ಯಾಕ್ ದರದಲ್ಲೇ ಕರೆಯನ್ನು ವ್ಯಾಲಿಡಿಟಿಯ ರಿಚಾರ್ಜನ ರಗಳೆ ಇಲ್ಲದೇ ಮಾಡಬಹುದು.
ಈ ಸೌಲಭ್ಯಗಳು ದೊರೆಯಬೇಕಾದರೆ ಎಲ್ಲಡೆ 4ಜಿ ಟವರ್ ಕವರೇಜ್ ಅತ್ಯಗತ್ಯ.



 (ಇಂದಿನ ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)


Wednesday, October 25, 2017

ನೆಟ್‌ತಂತ್ರ - 01



 ಇಂದು ಕಲಿಯುಗ ಎಂಬುದು ಡಿಜಿಟಲ್ ಯುಗವಾಗಿದೆಯೆಂದರೆ ಅದು ಅತಿಶಯೋಕ್ತಿ ಎನಿಸದು. ಇತ್ತೀಚಿಗೆ ಬಹುತೇಕ ನೊಂದಣಿ, ಇನ್ನಿತರ ಕಛೇರಿಯ ಕೆಲಸಗಳು ಆನ್ ಲೈನ್ ಮುಖಾಂತರವೇ ನಡೆಯುತ್ತಿರುವದು ಸಾಮಾನ್ಯವಾಗಿದೆ.   ಇವೆಲ್ಲವೂ ಕಂಪ್ಯೂಟರ್ ಮೂಲಕ  ಆಗುತ್ತದೆ ನಿಜ. ಆದರೂ ಸ್ಮಾರ್ಟ್ ಫೋನ್ ಮೂಲಕ ಬಹುಪಾಲು ಕೆಲಸಗಳನ್ನು  ನಾವೇ ಸರಳವಾಗಿ ಮಾಡಿಕೊಳ್ಳಬಹುದು ಇದಕ್ಕೆ ಇಂಟರ್ನೆಟ್ ನ ಸರಿಯಾದ ಸಂಪರ್ಕ ಇರುವದು ಅತ್ಯಗತ್ಯ.
 ಬನ್ನಿ ಸ್ಮಾರ್ಟ್ ಪೋನಿನ  ಸದ್ಬಳಕೆಯನ್ನು ಈ ನೆಟ್ ತಂತ್ರ ಲೇಖನ ಮಾಲೆಯಿಂದ ತಿಳಿದುಕೊಳ್ಳೋಣ.

ವೈಫೈ
ವೈಯರ್ ಲೆಸ್ ಫಿಡೆಲಿಟಿ ಎಂಬುದರ ಸೂಕ್ಷ್ಮ ರೂಪವೇ ವೈಫೈ.
ಈ ತಂತ್ರಜ್ಞಾನವು ರೇಡಿಯೋ ತರಂಗಾಂತರ ವ್ಯವಸ್ಥೆಯಮೇಲೆ  ಸಂವಹನೆಯಾಗಿ ಮಾಹಿತಿ ವಿನಿಮಯ, ಫೈಲ್ ಹಂಚಿಕೆಯಂತಹ ಕೆಲಸಕಾರ್ಯಗಳಿಗೆ ಬಳಕೆಯಾಗುತ್ತಿದೆ. ಜನಪ್ರಿಯ ಶೇರ್  ಇಟ್ ಎನ್ನುವ ಅಪ್ಲಿಕೇಶನ್ ಈ ವೈಫೈ ವ್ಯವಸ್ಥೆಯನ್ನು ಆಧರಿಸಿ ಕೆಲಸ ಮಾಡುತ್ತದೆ.
ನಿಮ್ಮ ವಾಸಸ್ಥಳದ  ಸಮೀಪ ಮೊಬೈಲ್ ಟವರ್ ಸಿಗ್ನಲ್ ದೊರಕದ ಸಂದರ್ಭದಲ್ಲಿ  ಸ್ಥಿರ ದೂರವಾಣಿ ಸಂಪರ್ಕದಿಂದ ವೈಯರ್ ಲೆಸ್ ಮಾಡೆಮ್ (ವೈಫೈ ಮಾಡೆಮ್) ಮೂಲಕ ಅಂತರ್ಜಾಲ ಸಂಪರ್ಕ ಹೊಂದಬಹುದು.
ಬಸ್,ರೈಲ್ವೆ, ವಿಮಾನ ನಿಲ್ದಾಣಗಳಲ್ಲಿ ಉಚಿತವಾಗಿ ವೈಫೈ ವ್ಯವಸ್ಥೆ ಮಾಡಿರುತ್ತಾರೆ. ಈಗ
ಗ್ರಾಮ ಪಂಚಾಯತಗಳಲ್ಲಿ ಕೂಡಾ ವೈಫೈಯನ್ನು ಸರ್ಕಾರವು ಉಚಿತವಾಗಿ (ದಿನಕ್ಕೆ 100 MB) ಕೊಡುತ್ತಿದೆ.

ಬಳಕೆಯ ವಿಧಾನ.
 ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ವೈಫೈಯನ್ನು ಆನ್ ಮಾಡಿಕೊಳ್ಳಬೇಕು ನಂತರ  free WiFi ಎಂದು ನಿಮ್ಮ ಮೊಬೈಲ್ ನಲ್ಲಿ ತೋರಿಸುತ್ತದೆ. ಅಲ್ಲಿ ನಿಮ್ಮ  ಮೊಬೈಲ್ ಸಂಖ್ಯೆ ಯನ್ನು ನಮೂದಿಸಬೇಕು. ನಿಮಗೆ ಒಂದು OTP ಅಥವಾ ಪಿನ್ ಮೆಸೇಜ್ ಬರುತ್ತದೆ ಆ ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ ನಮೂದಿಸಿದ ನಂತರ ಇಂಟರ್ನೆಟ್ಟನ್ನು ಬಳಕೆಮಾಡಬಹುದು‌.


ಉಚಿತವಾಗಿ ಸಿಗುವ ವೈಫೈಸಂಪರ್ಕದಿಂದ ವಾಟ್ಸಪ್, ಫೇಸ್ ಬುಕ್, ಯೂ ಟ್ಯೂಬ್ ನಂತಹ ಮನರಂಜನಾ ತಾಣ, ಸುದ್ದಿ ಪತ್ರಿಕೆ ಗಳನ್ನು ಓದಬಹುದು.(ಪಂಚಾಯತದಲ್ಲಿನ ವೈಫೈ ಯಲ್ಲಿ ವಾಟ್ಸಪ್ ಸೇವೆ ಸಿಗುವದಿಲ್ಲ.) ನಿಮ್ಮ ಮೊಬೈಲ್‌ನಲ್ಲಿರುವ ಮಾಹಿತಿಯನ್ನು ಮೂರನೇ ವ್ಯಕ್ತಿ ಪಡೆಯಬಹುದಾಗಿದೆ.ಇಂತಹ ಸ್ಥಳಗಳಲ್ಲಿ ಮೊಬೈಲ್ ಮೂಲಕ ಹಣಕಾಸು ವ್ಯವಹಾರ, ವರ್ಗಾವಣೆ ಮಾಡದಿರುವದು ಉತ್ತಮ.

OTP - One Time password.
 ಒಟಿಪಿ ಪಾಸ್ ವರ್ಡ್ ಎಂದರೆ ಒಂದು ಬಾರಿ ಬಳಕೆ ಮಾಡುವ ಪಾಸ್ ವರ್ಡ್ ಆಗಿದ್ದು ಇದು ನಾವು ಮಾಡುವ ವ್ಯಹಹಾರಕ್ಕೆ ಪುನಃ ದೃಢಿಕರಣ ಮಾಡಲು ಬಳಕೆಯಾಗುತ್ತಿದೆ. ಬ್ಯಾಂಕಿಂಗ್ ವಲಯದಲ್ಲಿನ ಹಣಕಾಸು ವರ್ಗಾವಣೆಯು OTP  ಇಲ್ಲದೇ ನಡೆಯುವುದಿಲ್ಲ.

(ಜನಮಾಧ್ಯಮ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.)